
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ ಬೆಳಿಗ್ಗೆ 4 ವರ್ಷದ ಹೆಣ್ಣು ಚಿರತೆಯೊಂದು ವಿಲವಿಲನೇ ಒದ್ದಾಡುತ್ತಿದ್ದನ್ನು ಅರಣ್ಯ ರಕ್ಷಕನ ಕಣ್ಣಿಗೆ ಬಿದ್ದು ಕಾಡು ಹಂದಿಗೆ ಹಾಕಿದ್ದ ಕಬ್ಬಿಣದ ಉರುಳಿಗೆ ಹೊಟ್ಟೆ ಭಾಗ ಸಂಪೂರ್ಣ ಸಿಲುಕಿತ್ತು.
ಬನ್ನೇರಘಟ್ಟ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ಅರವಳಿಕೆ ಚಿಕಿತ್ಸೆ ನೀಡಿ 15 ನಿಮಿಷಗಳ ಕಾಲ ದಿಢೀರನೆ ಶಾಕ್‌ಗೆ ಒಳಗಾಗಿ ಬೋನಿನಲ್ಲಿದ್ದ ಚಿರತೆ ಸಾವನ್ನಪ್ಪಿದೆ.

ನಂತರ ಪಶುಸಂಗೋಪನಾ ಇಲಾಖೆಯ ವೈಧ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಉರುಳಿಗೆ ಬಿದ್ದು 24 ಘಂಟೆಯಾಗಿದ್ದು ಅದಕ್ಕೆ ಕುಡಿಯಲು ನೀರು, ಆಹಾರ ಸಿಗದೆ ದೇಹ ನಿರ್ಜಲೀಕರಣ ಉಂಟಾಗಿ ರಕ್ತ ಸಂಚಾರ ನಿಂತು ನಿತ್ರಾಣವಾಗಿ ಸಾವನ್ನಪಿದೆ ಎಂದು ವರದಿ ನೀಡಿದ್ದಾರೆ.

ಅರಣ್ಯ ಸಿಬ್ಬಂದಿ ಹಾಗೂ ಪಶು ವೈದ್ಯಾಧಿಕಾರಿಗಳು ಚಿರತೆಯ ದೇಹ ಸುಟ್ಟಿದ್ದಾರೆ.