
ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೈಸೂರು ಜಿಲ್ಲೆಯ ಕೆ ಆರ್ ನಗರ ಹಾಸನ ರಸ್ತೆಯ ತಾಲ್ಲೂಕು ಕೃಷಿ ಮಾರಕಟ್ಟೆ ಬಳಿ ನಡೆದಿದೆ…
ಪಡಿತರ ಅಂಗಡಿಯ ಬದಲು ಕಾಳಸಂತೆಗೆ ಲಾರಿಯಲ್ಲಿ ಸಾಗಾಣೆ ಮಾಡುವ ವೇಳೆ 90 ಮೂಟೆ 46 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ…
ಡಿವೈಎಸ್ಪಿ ರಾಜಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಮಾರುಕಟ್ಟೆಯ ಹಿಂಬದಿ ದ್ವಾರದಿಂದ ಸಾಗಾಣೆ ಮಾಡಲಾಗುತ್ತಿತ್ತು.
ಮುಂದೆ ಎಂಟ್ರಿ ಮಾಡಿಸಿ ಹೊರಗೆ ದಾಸ್ತಾನು ತೆಗೆದುಕೊಂಡು ಹೋಗಬೇಕಿತ್ತು. ಆದರೆ, ಮಾರುಕಟ್ಟೆಯ ಹಿಂಬದಿ ದ್ವಾರದಿಂದ ಸಾಗಾಣೆ ಮಾಡಲಾಗುತ್ತಿತ್ತು.
ತಾಲ್ಲೂಕು ಕೃಷಿ ಮಾರುಕಟ್ಟೆ ಕಾರ್ಯದರ್ಶಿ ರವಿ ವಿರುದ್ಧ ರೇಷನ್ ಅಂಗಡಿ ಬದಲು ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ..
ಘಟನೆ ನಂತರ ರವಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸದ್ಯ ಯಾರ ಸಂಪರ್ಕಕ್ಕೂ ರವಿ ಸಿಗುತ್ತಿಲ್ಲ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ….