
ಒರಿಸ್ಸಾದಿಂದ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಕೆಲಸಕ್ಕೆಂದು ಬಂದು ಹೊಸ ವರ್ಷ ದಿನದಂದೇ ತನ್ನ ಸ್ನೇಹಿತನಿಂದಲೇ ಕೊಲೆಯಾದ್ನಾ ಯುವಕ….?
2025ರ ಡಿಸೆಂಬರ್ 31 ರಾತ್ರಿ ತನ್ನ ಪಾಡಿಗೆ ತಾನು ತನ್ನ ಬಾವನ ರೂಮಿನಲ್ಲಿದ್ದ ಸುಮಂತನಿಗೆ ಫೋನ್ ಮಾಡಿ ನಾಳೆ ಹೊಸ ವರ್ಷ ಇದೆ, ಇವತ್ತು ರೂಮಿನಲ್ಲಿ ರಾತ್ರಿಯೆಲ್ಲಾ ಎಣ್ಣೆ ಪಾರ್ಟಿ ಮಾಡೋಣ ಬಾ ಎಂದು ಕರೆಸಿಕೊಂಡು ಕಂಠಪೂರ್ತಿ ಕುಡಿಯುತ್ತಾ ಎಂಜಾಯ್ ಮಾಡಿ, ಕೊನೆಗೆ ಕಿರಿಕ್ ತೆಗೆದು ಸ್ನೇಹಿತನನ್ನೇ ಕೊಂದ್ನಾ ಐನಾತಿ…?
ಯೆಸ್…. ಹೊಸ ವರ್ಷ ದಿನ ಇಂದು ಬೆಳಗ್ಗೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಅಜಾಕ್ಸ್ ಶಾಲೆ ಹಿಂಭಾಗ ಯುವಕನ ಮೃತದೇಹ ಪತ್ತೆಯಾಗುತ್ತದೆ. ಮಾಹಿತಿ ತಿಳಿದು ಇಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಚಂದ್ರಕಾಂತ್ ಎಂ.ವಿ, ಎಎಸ್ ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು, ಸೂಕ್ತ ತನಿಖೆ ನಡೆಸಿದಾಗ ಮೃತನ ಮುಖ, ಬಲ ಕೈ ಮೇಲೆ ರಕ್ತದ ಗಾಯಗಳು ಕಂಡುಬಂದಿದ್ದು, ಸ್ನೇಹಿತನೇ ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ….
ಮೃತ ದುರ್ದೈವಿಯನ್ನು ಒರಿಸ್ಸಾ ಮೂಲದ ಸುಮಂತ್(24) ಎಂದು ಗುರುತಿಸಲಾಗಿದೆ….
ಸದ್ಯ ಸುಮಂತ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದಾತ ಎಸ್ಕೇಪ್ ಆಗಿದ್ದು, ಆತನೇ ಸುಮಂತ್ ನನ್ನು ಕೊಲೆ ಮಾಡಿರಬಹುದು ಎಂದು ಮೃತನ ಸಂಬಂಧಿಕರು ಶಂಕಿಸಿ ದೂರು ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ….
ಸುಮಂತ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದಾತ ಪೊಲೀಸರ ಕೈಗೆ ಸಿಕ್ಕಿದ ಮೇಲೆ ಅಸಲಿ ಸತ್ಯ ಬೆಳಕಿಗೆ ಬರಲಿದೆ…
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…..
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…