
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಗ್ರಾಮಾಂತರ ಠಾಣಯಲ್ಲಿ ಜ್ಯೂಯಲರಿ ಶಾಪ್ ಮಾಲೀಕರುಗಳಿಗೆ, ಜ್ಯೂಯಲರಿ ಶಾಪ್ ಗಳಲ್ಲಿ ನಡೆಯುತ್ತಿರುವ ದರೋಡೆ, ಸುಲಿಗೆ & ಕಳವು ಪ್ರಕರಣಗಳ ಬಗ್ಗೆ ಅರಿವು ಹಾಗೂ ಶಾಪ್ ಗಳ ಭದ್ರತೆಗೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ಮತ್ತು ಸೈರನ್ ಅಳವಡಿಸಿ ಸದಾ ಕಣ್ಗಾವಲು ಇರಿಸಿಕೊಳ್ಳುವ ಬಗ್ಗೆ ಹಾಗೂ ಇತ್ತೀಚಿನ ಆರ್.ಬಿ.ಐ ಮತ್ತು ಪೊಲೀಸ್ ಮಾರ್ಗಸೂಚಿಗಳ ಅನ್ವಯ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಕುರಿತು ಕಾರ್ಯಗಾರ ಹಮ್ಮಿಕೊಂಡು ಪೂರ್ಣ ಅರಿವು ಮೂಡಿಸಲಾಯಿತು.