
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ ಮೌಲ್ಯದ 140 ಕ್ಕೂ ಅಧಿಕ ಕೆಜಿ ಬೆಳ್ಳಿ ಅಭರಣಗಳನ್ನ ಕಳವು ಮಾಡಿದ್ದಾರೆ…..
ಕಳೆದ ರಾತ್ರಿ ಚಿನ್ನದಂಗಡಿಯ ಬಾಗಿಲಿನ ಬೀಗಗಳನ್ನ ಕಟ್ ಮಾಡಿರುವ ಕಳ್ಳರು, ಷೋ ಕೇಸ್ ನಲ್ಲಿ ಡಿಸ್ ಪ್ಲೇ ಮಾಡಿದ್ದ ಎಲ್ಲಾ ಅಭರಣಗಳನ್ನ ಕಳವು ಮಾಡಲಾಗಿದೆ.

ಅದೃಷ್ಟವಶಾತ್ ಚಿನ್ನದ ಅಭರಣಗಳನ್ನ ಲಾಕರ್ ನಲ್ಲಿ ಇಡಲಾಗಿತ್ತು, ಇದರ ಪರಿಣಾಮ ಕಳ್ಳರಿಗೆ ಚಿನ್ನಾಭರಣಗಳು ಸಿಕ್ಕಿಲ್ಲ. ಹೀಗಾಗಿ ಬೆಳ್ಳಿ ಅಭರಣಗಳನ್ನ ಕಳ್ಳರು ಕಳವು ಮಾಡಿದ್ದಾರೆ.
ಇನ್ನೂ ಬೆಳಿಗ್ಗೆ ಎಂದಿನಂತೆ ಅಂಗಡಿ ಬಾಗಿಲು ತೆರೆಯಲು ಸಿಬ್ಬಂದಿ ಆಗಮಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸಿ ಹಾದಿಯಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನೂ ಸಿಸಿ ಟಿವಿಯ ಎರಡು ಡಿವಿಆರ್ ಗಳನ್ನ ಸಹ ಕಳ್ಳರು ಹೊತ್ತೊಯ್ದಿದ್ದಾರೆ. ಇತ್ತೀಚೆಗೆ ಅಂಗಡಿಯ ಮುಂಭಾಗ ಹೊಸ ನೇಮ್ ಬೋರ್ಡ್ ಆಳವಡಿಕೆ ಕಾರ್ಯ ಸಹ ನಡೆಸಲಾಗುತ್ತಿದ್ದು, ಹೊರಗಡೆ ಸಿ ಸಿ ಟಿವಿ ಕ್ಯಾಮೆರಾಗಳನ್ನ ತೆಗದು ಹಾಕಲಾಗಿತ್ತು. ಆದ್ರೆ ಪಕ್ಕದ ಅಂಗಡಿಯ ಸಿ ಸಿ ಟಿವಿ ಕ್ಯಾಮೆರಾಗಳ ಸೇರಿದಂತೆ ಅಕ್ಕ ಪಕ್ಕದ ಅಂಗಡಿಗಳ ಸಿ ಸಿ ಟಿವಿ ಕ್ಯಾಮೆರಾಗಳನ್ನ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.