
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ ರಾತ್ರಿ ನಂದಿಬೆಟ್ಟ ಕ್ರಾಸ್ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ…

ದೊಡ್ಡಬಳ್ಳಾಪುರ ತಾಲೂಕಿನ ದಂಡುದಾಸಕೊಡಿಗೇಹಳ್ಳಿ ನಿವಾಸಿ ಹರ್ಷನ್ ಎಂ (21), ಮೃತಪಟ್ಟ ಯುವಕ.
ಮೃತ ಹರ್ಷನ್ ಸಹೋದರ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ತನ್ನ ಸಹೋದರನನ್ನು ಚಿಕ್ಕಬಳ್ಳಾಪುರದಿಂದ ಊರಿಗೆ ಬೈಕಿನಲ್ಲಿ ಕರೆದುಕೊಂಡು ಬರಬೇಕಾದರೆ ನಂದಿ ಕ್ರಾಸ್ ಸಮೀಪ ಜೆಸಿಬಿ ಲೈಟ್ ಹಾಕಿಕೊಳ್ಳದೇ ದಿಢೀರನೆ ಲೇಔಟ್ ನಿಂದ ಮುಖ್ಯರಸ್ತೆಗೆ ಬಂದಿದೆ. ಈ ವೇಳೆ ಜೆಸಿಬಿ ಕಾಣಿಸದ ಹಿನ್ನೆಲೆ ಬೈಕ್ ಜೆಸಿಬಿಗೆ ಡಿಕ್ಕಿ ಹೊಡೆದಿದೆ….
ಡಿಕ್ಕಿ ರಭಸಕ್ಕೆ ಅಣ್ಣ ಹರ್ಷನ್ ಎಂ (21), ಸ್ಥಳದಲ್ಲೇ ಸಾವನ್ನಪ್ಪಿದ್ದು, ತಮ್ಮ ಅಭಿನಂದನ್ ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ…..