ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ….

ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ವತಿಯಿಂದ ಸಕಲ ಸಿದ್ಧತೆ ನಡೆಸಿಕೊಳ್ಳಲಾಗಿದೆ.

ಪೂಜೆ ಪ್ರಾರಂಭ ಸಮಯ

ಡಿ.25ರ ಗುರುವಾರದಂದು ಪ್ರಾತಃ ಕಾಲ 2:00 ಗಂಟೆಗೆ ದೇವಾಲಯ ತೆರೆಯಲಾಗುವುದು, 2:30 ಗಂಟೆಗೆ ದೇವರಿಗೆ ಅಭಿಷೇಕ ಪ್ರಾರಂಭವಾಗಿ ಬೆಳಗ್ಗೆ 4:30 ಗಂಟೆಗೆ ಮಹಾ ಮಂಗಳಾರತಿ ನೆರವೇರುವುದು, ಬೆಳಗ್ಗೆ 5:00 ರಿಂದ 6:00 ಗಂಟೆಗಳವರೆಗೆ ಸ್ಥಳೀಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆ ನಂತರ ಭಕ್ತಾಧಿಗಳಿಗಾಗಿ ಧರ್ಮ ದರ್ಶನ ಮತ್ತು ರೂ. 50 ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ.

ಸಾರಿಗೆ ವ್ಯವಸ್ಥೆ

ರಥೋತ್ಸವ ದಿನದಂದು ಘಾಟಿಗೆ ಬರುವ ಭಕ್ತಾಧಿಗಳಿಗಾಗಿ ದೊಡ್ಡಬಳ್ಳಾಪುರದ ಬಳಿ ಕಂಟನಕುಂಟೆಯಿಂದ 15 ಮತ್ತು ಮಾಕಳಿಯಿಂದ 10 ಉಚಿತ ಬಸ್ (KSRTC) ಗಳನ್ನು ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ (ಈ ಸ್ಥಳಗಳಲ್ಲಿ 04 ಮತ್ತು 02 ಚಕ್ರ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಸುಂಕ ವಿನಾಯಿತಿ

1/12/2025 ರಿಂದ 31/01/2026 ರವರಗೆ ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿರುತ್ತದೆ.

ಪೊಲೀಸ್ ಬಂದೋಬಸ್ತ್

ಭಕ್ತಾಧಿಗಳ ಭದ್ರತೆ ಮತ್ತು ಸಂಚಾರ ಸುಗಮ ವ್ಯವಸ್ಥೆಗಾಗಿ ಸುಮಾರು 700 ಜನ ಪೋಲಿಸ್ ಸಿಬ್ಬಂದಿ ಮತ್ತು 200 ಮಂದಿ ಗೃಹ ರಕ್ಷಕ ಸಿಬ್ಬಂದಿ(Home Guard) ಶ್ರೀ ಕ್ಷೇತ್ರಕ್ಕೆ ನಿಯೋಜಿಸಲಾಗಿರುತ್ತದೆ.

ಸಿಸಿ ಟಿವಿ ಅಳವಡಿಕೆ

ಸರಗಳ್ಳತನ, ಜೇಬುಗಳ್ಳತನ ಹಾಗೂ ಯಾವುದೇ ಅವಘಡಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕ್ಷೇತ್ರದ 1 ಕಿ.ಮೀ. ಸುತ್ತಳತೆಯಲ್ಲಿ ಸುಮಾರು 80 ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಇರಿಸಲಾಗಿರುತ್ತದೆ.

ಉಚಿತ ಅನ್ನ ದಾಸೋಹ

ಬ್ರಹ್ಮರಥೋತ್ಸವ ದಿನದಂದು ಬೆಳಗ್ಗೆ 6ರಿಂದ ರಾತ್ರಿ 8:30ರವರೆಗೆ ಎಲ್ಲಾ ಭಕ್ತಾಧಿಗಳಿಗೂ ಉಚಿತ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿರುತ್ತದೆ.

ದೇವರ ದರ್ಶನಕ್ಕೆ ಕ್ಯೂ ಸಿಸ್ಟಮ್ 

ಭಕ್ತಾಧಿಗಳಿಗೆ ಸುಗಮ ದರ್ಶನದ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು ರೂ. 50ಗಳ ವಿಶೇಷ ದರ್ಶನದ ಕ್ಯೂ ಲೈನ್‌ ಅನ್ನು ಮಾಡಿಸಲಾಗಿರುತ್ತದೆ. (ಕ್ಯೂ ಲೈನ್‌ ನಲ್ಲಿರುವ ಭಕ್ತಾಧಿಗಳಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ).

ವೈದ್ಯಕೀಯ ಸೇವೆ

ತುರ್ತು ಸೇವೆಗಳ ನಿಮಿತ್ತ 3 ಆಂಬುಲೆನ್ಸ್ ವಾಹನಗಳನ್ನು ಮತ್ತು ಆರೋಗ್ಯ ಇಲಾಖೆ ತಂಡವನ್ನು ಹಾಗೂ ಅಗ್ನಿ ಶಾಮಕ ವಾಹನದ ವ್ಯವಸ್ಥೆ ಮಾಡಲಾಗಿರುತ್ತದೆ.

ದೀಪಾಲಂಕಾರ

ಡಿ.23ರಿಂದ ಡಿ.28ರವರೆಗೆ ಶ್ರೀಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿರುತ್ತದೆ.

ಆಯ್ದ ವ್ಯಕ್ತಿಗಳಿಗೆ ನೇರ ದೇವರ ದರ್ಶನ

ಹಿರಿಯ ನಾಗರೀಕರು, ವಿಶೇಷ ಚೇತನರು, ಗರ್ಭಿಣಿಯರು ಮತ್ತು 01 ವರ್ಷದ ಒಳಗಿನ ಶಿಶುವಿನೊಂದಿಗೆ ಬರುವ ಸ್ತ್ರೀಯರಿಗೆ ನೇರ ದರ್ಶನದ ವ್ಯವಸ್ಥೆಗಾಗಿ Buggis ಗಳ ವ್ಯವಸ್ಥೆ ಮಾಡಲಾಗಿರುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಭಕ್ತಾಧಿಗಳು/ ಸಾರ್ವಜನಿಕರ ಉಪಯೋಗಕ್ಕಾಗಿ Mobile ಶೌಚಾಲಯಗಳ ವ್ಯವಸ್ಥೆ ಮಾಡಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!