
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಪಾಳ್ಯದಲ್ಲಿ ನಡೆದಿದೆ….
ಕಾಡನೂರು ಪಾಳ್ಯ ಗ್ರಾಮದ ಹೊರವಲಯದಲ್ಲಿ ಒಂಟಿ ಮನೆ ಇತ್ತು. ಮನೆಯಲ್ಲಿ ಮಹಿಳೆ ಒಬ್ಬರೇ ಇದ್ದಾಗ ಆಫ್ರೀಕಾ ಮೂಲ ಎನ್ನಲಾದ ಇಬ್ಬರು ಯುವಕರು ನಿನ್ನೆ ಹಾಗೂ ಇಂದು ಬೈಕ್ ನಲ್ಲಿ ಬಂದು ಮನೆ ಸುತ್ತಾ ಓಡಾಡುತ್ತಿದ್ದರು. ಆಸಾಮಿಗಳನ್ನು ನೋಡಿದ ಮಹಿಳೆ ಭಯಭೀತರಾಗಿ ಜೋರಾಗಿ ಕೂಗಿ ಊರಿನವರಿಗೆ ಮಾಹಿತಿ ತಿಳಿಸುತ್ತಾರೆ. ಗ್ರಾಮಸ್ಥರನ್ನು ಕಂಡ ಆಸಾಮಿಗಳು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ, ಗ್ರಾಮಸ್ಥರು ಆ ಇಬ್ಬರು ಯುವಕರನ್ನು ಹಿಡಿದು ದೊಡ್ಡಬೆಳವಂಗಲ ಪೊಲೀಸರಿಗೆ ಬೈಕ್ ಸಮೇತ ಒಪ್ಪಿಸಿದ್ದಾರೆ ಎನ್ನಲಾಗಿದೆ….
ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಸೂಕ್ತ ವಿಚಾರಣೆ ನಡೆಸಿ, ಪಾಸ್ ಪೋರ್ಟ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.. ಹರಿಯಾಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..
ಆಫ್ರಿಕಾ ಮೂಲದ 22 ವರ್ಷದ ಭಾ ಸುಲೇಮಾನ್, 21 ವರ್ಷದ ಕೊಲ್ಲೆ ಸಬಿಯನ್ ಎಂದು ಗುರುತಿಸಲಾಗಿದೆ. ಪೊಲೀಸರು ಅವರನ್ನು ನೆಲಮಂಗಲದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಕರೆದೋಯ್ದಿದ್ದಾರೆ. ಆದರೆ ಅವರಿಬ್ಬರ ವೀಸಾ ಪಾಸ್ ಪೋರ್ಟ್ ಅವಧಿ ಮುಗಿದಿದ್ದ ಹಿನ್ನೆಲೆ ಬೆಂಗಳೂರಿನ ಶಾಂತಿನಗರದಲ್ಲಿರುವ FRRO ಗೆ ಬಿಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ..