
ಬೆಂಗಳೂರು : ಮಹಿಳೆಯೊಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಹಿಂದೆ ಬಿದ್ದು, ಪ್ರೀತಿಸುವಂತೆ ಕಾಟ ಕೊಡುತ್ತಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.
ರಾಮಮೂರ್ತಿ ನಗರ ಠಾಣೆ ಇನ್ಸ್ ಪೆಕ್ಟರ್ ಸತೀಶ್ ಎಂಬುವವರಿಗೆ ಮಹಿಳೆಯೊಬ್ಬರು ತನ್ನನ್ನು ಪ್ರೀತಿಸುವಂತೆ ಹಲವು ಮೊಬೈಲ್ ನಂಬರ್ ಗಳ ಮೂಲಕ ಕರೆ ಮಾಡಿ, ಸಾಲು ಸಾಲು ಲೆಟರ್ ಗಳನ್ನು ಬರೆದು ಕಳುಹಿಸಿದ್ದಾರೆ.
ಚಿನ್ನಿ ಐ ಲವ್ ಯು, ಯು ಮಸ್ಟ್ ಲವ್ ಮಿ ಎಂದು ಸಾವಿರಾರು ಮೆಸೇಜ್ ಗಳನ್ನು ಕಳುಹಿಸಿತ್ತಾರಂತೆ. ಮಹಿಳೆ ಬರ್ರೋಬ್ಬರಿ 11 ಮೊಬೈಲ್ ನಂಬರ್ ಗಳಿಂದ ಇನ್ಸ್ ಪೆಕ್ಟರ್ ಗೆ ಮೆಸೇಜ್ ಕಳುಹಿಸಿ ಕಾಟ ಕೊಡುತ್ತಿದ್ದು, ಇದರಿಂದ ಬೇಸತ್ತ ಇನ್ಸ್ ಪೆಕ್ಟರ್ 11 ನಂಬರ್ ಗಳನ್ನು ಬ್ಲಾಕ್ ಮಾಡಿದ್ದಾರೆ.
ಆದಾಗ್ಯೂ ಮಹಿಳೆಯ ಕಾಟ ನಿಂತಿಲ್ಲ. ತನ್ನನ್ನು ಪ್ರೀತಿಸದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ತಾನು ಕಾಂರೆಸ್ ಕಾರ್ಯಕರ್ತೆ, ತನಗೆ ಗೃಹ ಸಚಿವರು, ಡಿಸಿಎಂ ಗೊತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಗೊತ್ತು ಎಂದು ಅವರೊಂದಿಗಿರುವ ಫೋಟೋಗಳನ್ನು ಇನ್ಸ್ ಪೆಕ್ಟರ್ ಗೆ ಕಳುಹಿಸಿದ್ದಾಳಂತೆ. ಠಾಣೆಯಲ್ಲಿ ಪಿಐ ಇಲ್ಲದಿದ್ದಾಗ ಕಜ್ಜಾಯ ಡಬ್ಬಿ, ಹೂ ಬೊಕ್ಕೆಗಳನ್ನು ಠಾಣೆಗೆ ತಂದಿಟ್ಟಿದ್ದು, ಲವ್ ಲೆಟರ್ ಜೊತೆಗೆ ನಿದ್ರೆ ಮಾತ್ರೆಯನ್ನೂ ಕಳುಹಿಸಿಕೊಟ್ಟಿದ್ದಾಳಂತೆ. ನನ್ನ ಪ್ರೀತಿಯನ್ನು ನೀವು ಒಪ್ಪುತ್ತಿಲ್ಲ. ತೊಂದರೆ ಕೊಡುವುದಿಲ್ಲ. ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ದಿದ್ದಾಳೆ. ನನ್ನ ಸಾವಿಗೆ ನೀವೆ ಕಾರಣ ಎಂದು ರಕ್ತದಲ್ಲಿ ಹಾರ್ಟ್ ಚಿತ್ರ ಬರೆದು ಕಳುಹಿಸಿದ್ದಾಳಂತೆ.
ಮಹಿಳೆಯ ಕಾಟಕ್ಕೆ ಬೇಸತ್ತ ಇನ್ಸ್ ಪೆಕ್ಟರ್ ಸತೀಶ್, ಕರ್ತವ್ಯಕ್ಕೆ ಅಡ್ಡಿ, ಮಹಿಳೆಯಿಂದ ಕಿರುಕುಳ, ಬೆದರಿಕೆ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.