
ಡಿ.4ರ ಗುರುವಾರ ರಾತ್ರಿ ಸುಮಾರು 10:19 ಗಂಟೆಯಲ್ಲಿ ಪವನ್ ಕುಮಾರ್(27) ಎಂಬ ಯುವಕನನ್ನು ದೊಡ್ಡಬಳ್ಳಾಪುರ ನಗರದ ಚರ್ಚ್ ಗೇಟ್ ಬಳಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಲಾಗಿದ್ದ ಘಟನೆ ದೊಡ್ಡಬಳ್ಳಾಪುರವನ್ನು ಬೆಚ್ಚಿಬೀಳಿಸಿತ್ತು.

ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಅಪ್ರಾಪ್ತ ಸೇರಿದಂತೆ ಐವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ…

ಎ1 ಮಂಜ, ಎ2 ಉದಯ್, ಎ3 ಹೇಮಂತ, ಎ4 ಸಂದೀಪ ಸೇರಿದಂತೆ ಓರ್ವ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ…
ಆರೋಪಿಗಳ ವಿವರ

1) ಮಂಜುನಾಥ.ಕೆ 22 ವರ್ಷ, ಡ್ರೈವರ್ ಕೆಲಸ, ವಾಸ- ಕಂಟನಕುಂಟೆ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು. ಸ್ವಂತ ಸ್ಥಳ-ಖಾಜಿ ಹೊಸಹಳ್ಳಿ ಗ್ರಾಮ, ಕಟ್ಟಿಗೇನಹಳ್ಳಿ ಪೋಸ್ಟ್, ಹೊಸಕೋಟೆ ತಾಲ್ಲೂಕು.

2) ಉದಯಕುಮಾರ 22 ವರ್ಷ, ಡ್ರೈವರ್ ಕೆಲಸ, ವಾಸ- ಸಿದ್ದೇನಾಯಕನಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ಟೌನ್.

3) ಹೇಮಂತಕುಮಾರ 22 ವರ್ಷ, ಜೆ.ಸಿ.ಡ್ರೈವರ್ ಕೆಲಸ, ವಾಸ- ಸಿದ್ದೇನಾಯಕನಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ಟೌನ್.

4) ಸಂದೀಪ, ಜಿ 23 ವರ್ಷ, ಡ್ರೈವರ್ ಕೆಲಸ, ಮಲ್ಲತಹಳ್ಳಿ ಗ್ರಾಮ, ಕಸಬಾ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು. ಸ್ವಂತ ಸ್ಥಳ:- ಬೊಮ್ಮವಾರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು.
5) ಅಪ್ರಾಪ್ತ ಬಾಲಕ(ಕಾನೂನು ಸಂಘರ್ಷಕ್ಕೆ ಒಳಪಡುವವ)
ಘಟನೆ ವಿವರ

ಮೃತ ಯುವಕ ಪವನ್ ಡಿ.4 ರಾತ್ರಿ ಸುಮಾರು 10:15ರ ಸಮಯದಲ್ಲಿ ಆಟೋ ಚಾಲನೆ ಮಾಡಿಕೊಂಡು ಡಿಕ್ರಾಸ್ ಕಡೆಯಿಂದ ಟಿಬಿ ವೃತ್ತದ ಕಡೆಗೆ ಬರುವ ವೇಳೆ ಚರ್ಚ್ ಬಳಿ ಆಟೋವನ್ನು ಹಿಂಬಾಲಿಸಿಕೊಂಡು ಬಂದ ಸ್ವಿಫ್ಟ್ ಡಿಸೈರ್ ಕಾರೊಂದು ಅಡ್ಡಗಟ್ಟುತ್ತದೆ. ಆಟೋ ನಿಲ್ಲಿಸಿದ ತಕ್ಷಣ ಕಾರಿನಲ್ಲಿದ್ದ ನಾಲ್ಕು ಜನ ಗ್ಯಾಂಗ್ ಪವನ್ ನನ್ನು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೈ, ಎದೆಭಾಗ, ಮುಖ ಹಾಗೂ ದೇಹದ ಇತರೆ ಭಾಗಗಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ಕಾರಿನಲ್ಲಿ ಎಸ್ಕೇಪ್ ಆಗುತ್ತಾರೆ.

ರಕ್ತದ ಮಡುವಿನಲ್ಲಿ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಡಿವೈಡರ್ ಮೇಲೆ ಪವನ್ ಮೃತ ದೇಹ ಬಿದ್ದಿತ್ತು, ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನೆ ಮಾಡುತ್ತಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಹಾಗೂ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಪಾಂಡುರಂಗ, ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ……
ನಗರ ಪೊಲೀಸ್ ಠಾಣೆ ಹಾಗೂ ಡಿವೈಎಸ್ ಪಿ ಕಚೇರಿಯ ಕೂಗಳತೆ ದೂರದಲ್ಲಿರುವ ಚರ್ಚ್ ಪಕ್ಕದಲ್ಲೇ ಹಾದುಹೋಗಿರುವ ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿತ್ತು…

ಕೊಲೆಗೆ ಮೂಲ ಕಾರಣ ಏನು ಗೊತ್ತಾ….?
ದೊಡ್ಡಬಳ್ಳಾಪುರದಲ್ಲಿ ಭೀಕರ ಕೊಲೆಗೆ ಅಕ್ರಮ ಸಂಬಂಧ ಕಾರಣವಂತೆ. ತಂಗಿಯ ಜೊತೆ ಇದ್ದ ಅಫೇರ್ ನ್ನು ಪ್ರಶ್ನೆ ಮಾಡಿದ ಅಣ್ಣನ ಸ್ನೇಹಿತನಿಗೆ ಚಟ್ಟ ಕಟ್ಟಿದ ಹಂತಕರು…
ಮೃತ ಪವನ್ ಸ್ನೇಹಿತನ ಪ್ರೇಮಿ ಎಂಬುವವನ ತಂಗಿಯ ಜೊತೆ ಕಾರು ಮಾಲೀಕ, ಎ4 ಸಂದೀಪನಿಗೆ ಅಫೇರ್ ಇತ್ತು. ಈ ವಿಚಾರವಾಗಿ ಪ್ರೇಮಿ ಹಾಗೂ ಸಂದೀಪನ ನಡುವೆ ಹೊಡೆದಾಟ, ಬಡೆದಾಟ ನಡೆದಿತ್ತು. ನನ್ನನ್ನು ಹೊಡೆಯಲು ಪ್ರೇಮಿ ಸ್ನೇಹಿತ ಪವನ್ ನೇರ ಕಾರಣ ಎಂದು ಎ4 ಸಂದೀಪ್ ತಿಳಿದುಕೊಂಡಿದ್ದ. ಹೀಗಾಗಿ ಪವನ್ ಅಥವಾ ಪ್ರೇಮಿಯನ್ನು ಕೊಲೆ ಮಾಡಲೇ ಬೇಕು ಎಂದು ಸಂದೀಪ್ ನಿರ್ಧರಿಸಿದ್ದ. ಈ ವಿಚಾರವನ್ನು ಎ1 ಮಂಜನಿಗೆ ತಿಳಿಸಿದ್ದ. ಕೊಲೆ ಮಾಡಲು ಘಾಟಿಯಲ್ಲಿ ಮಾರಕಾಸ್ತ್ರಗಳನ್ನು ಖರೀದಿ ಮಾಡಿದ್ದ.

ಕಳೆದ 15 ದಿನಗಳಿಂದೆ ಖಾಸಗಿ ಕಂಪನಿ ಬಳಿ ಮತ್ತೆ ಕ್ಷುಲ್ಲಕ ವಿಚಾರಕ್ಕೆ ಸಂದೀಪ್ ಮತ್ತು ಮೃತ ಪವನ್ ನಡುವೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ಇನ್ನು ಎರಡು ಮೂರು ದಿನದಲ್ಲಿ ಸಂದೀಪ್ ನನ್ನು ಮುಗಿಸುತ್ತೇನೆ ಎಂದು ಪವನ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನಂತೆ, ಈ ವಿಚಾರ ಸಂದೀಪ್ ಕಿವಿಗೆ ಬೀಳುತ್ತದೆ. ಆಗ ಸಂದೀಪ್ ತನ್ನ ಶಿಷ್ಯನಾದ ಎ1 ಮಂಜುಗೆ ಹೀಗೆ ನನ್ನ ಕೊಲೆ ಮಾಡುತ್ತಾರಂತೆ ಏನು ಮಾಡೋದು ಎಂದು ತಿಳಿಸಿದಾಗ ಅವನು ನಿನ್ನನ್ನು ಮುಗಿಸುವ ಮುಂಚೆಯೇ ಪವನ್ ಅಥವಾ ಪ್ರೇಮಿ ಇಬ್ಬರಲ್ಲಿ ಒಬ್ಬರನ್ನು ಮುಗಿಸಿಬಿಡೋಣ ಎಂದು ಮಂಜ ತೀರ್ಮಾನಿಸುತ್ತಾನೆ.
ಪವನ್ ಮತ್ತು ಪ್ರೇಮಿಗಾಗಿ ಸಂದೀಪ, ಮಂಜ &ಟೀಂ ಹುಡುಕಾಟದಲ್ಲಿರುತ್ತಾರೆ. ತನ್ನ ಗುರುವಾದ ಸಂದೀಪ್ ಕಾರನ್ನು ಹಾಕಿಕೊಂಡು ನಾಲ್ಕು ಮಂದಿ ಟೀಮ್ ದೊಡ್ಡಬಳ್ಳಾಪುರದ ಕಡೆಗೆ ಬಂದೇ ಬಿಡ್ತಾರೆ.

ಡಿ.4ರಂದು ಪವನ್ ರಾತ್ರಿ ವೇಳೆ ಒಬ್ಬೊಂಟಿಯಾಗಿ ಹೊರಗಡೆ ಓಡಾಡುವುದನ್ನು ಗಮನಿಸಿ, ಎರಡು ಮೂರು ಕಡೆ ಕೊಲೆ ಮಾಡಲು ಸ್ಕೆಚ್ ಹಾಕ್ತಾರೆ. ಆದರೆ ಜನ ಇದ್ದ ಕಾರಣ ಅಲ್ಲಿ ಆಗಲಿಲ್ಲ.
ಪವನ್ ಒಬ್ಬೊಂಟಿಯಾಗಿ ಆಟೋ ತೆಗೆದುಕೊಂಡು ಡಿಕ್ರಾಸ್ ಕಡೆಯಿಂದ ಟಿಬಿ ಸರ್ಕಲ್ ಕಡೆ ಬರುವುದನ್ನು ಗಮನಿಸಿದ ಹಂತಕರು, ನಗರ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಆಟೋವನ್ನು ಅಡ್ಡಗಟ್ಟಿ ಪವನ್ ನನ್ನು ಆಟೋದಿಂದ ಹೊರ ಎಳೆದುಕೊಂಡು ಮನಸೋಇಚ್ಛೆ ಎದೆಗೆ, ಕತ್ತಿನ ಹಿಂಭಾಗ, ಹೊಟ್ಟೆಗೆ ಕಣ್ಮುಚ್ಚಿ ಕಣ್ಣು ತೆರೆಯೋದರಲ್ಲಿ ಚುಚ್ಚಿ ಚುಚ್ಚಿ ಹತ್ಯೆ ಮಾಡಿ ಎಸ್ಕೇಪ್ ಆಗ್ತಾರೆ…

ಕೊಲೆ ನಂತರ ತಲೆಮರೆಸಿಕೊಂಡಿದ್ದು ಎಲ್ಲಿ ಗೊತ್ತಾ….?
ಕೊಲೆ ಮಾಡಿದ ನಂತರ ಆರೋಪಿಗಳು ಬೆಂಗಳೂರಿಗೆ ಹೋಗಲು ತೀರ್ಮಾನಿಸುತ್ತಾರೆ. ಮಾರಸಂದ್ರ ಟೋಲ್ ತಪ್ಪಿಸಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಟಿಬಿ ಸರ್ಕಲ್ ನಿಂದ ನಂದಿ ಮೋರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಾರೆ.. ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆದಲ್ಲೇ ಕಾರಿನ ನಂಬರ್ ಪ್ಲೇಟ್ ಕಿತ್ತೆಸೆಯುತ್ತಾರೆ. ನಂತರ ಕೆಆರ್ ಪುರಂ ಬಳಿ ಕಾರು ಬಿಟ್ಟು, ಬೇರೆ ವಾಹನದ ಮೂಲಕ ಮೇಡಿಮಲ್ಲಸಂದ್ರದಲ್ಲಿರುವ ಎ2 ಆರೋಪಿ ಉದಯ್ ತಾಯಿ ಮನೆಯಲ್ಲಿ ಆಶ್ರಯಪಡೆಯುತ್ತಾರೆ.. ಕೊಲೆ ನಂತರ ಯಾರೂ ಸಹ ಮೊಬೈಲ್ ಬಳಸಿಲ್ಲ. ಉದಯ್ ತಾಯಿಗೂ ತಿಳಿಸಿರಲಿಲ್ಲ….

ಕೊಲೆ ಆರೋಪಿಗಳ ಪತ್ತೆಗಾಗಿ ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಹಾಗೂ ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂಬಿ ನೇತೃತ್ವದ ಹುಸೇನ್, ಪ್ರದೀಪ್, ಪಾಂಡುರಂಗ, ರೂಪೇಶ್, ಶಿವಾನಂದ, ಪ್ರದೀಪ್ ಕುಮಾರ್, ಮುನಿರಾಜ್ ತಂಡವು ಹಗಲಿರುಳು ಶ್ರಮವಹಿಸಿ ಕೊನೆ ಇಂದು ಬೆಳಗ್ಗೆ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ….
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ….
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು….