ಸಾರ್ವಜನಿಕರಿಗೆ ಗೃಹ ಸಾಲ ನೀಡುವ ಕಚೇರಿಯಲ್ಲಿ ಸಿಬ್ಬಂದಿಯೋರ್ವ ನೇಣು ಬಿಗಿದುಕೊಂಡು ಸಾವನಪ್ಪಿರುವ ಘಟನೆ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಗ್ರಾಮದ ಮುರುಳಿಧರ್ (50), ಎಂದು ಗುರುತಿಸಲಾಗಿದೆ. ಈತ ರೈಲ್ವೇ ನಿಲ್ದಾಣದ ಬಳಿಯಿರುವ ಮಾಶ್ರೀ ಹೋಮ್ ಲೋನ್ ಕಚೇರಿಯಲ್ಲಿ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ನೇಣು ಬಿಗಿದುಕೊಂಡು ಎರಡು ಮೂರು ದಿನಗಳಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.