ರಸ್ತೆ ಬದಿಯಲ್ಲಿ ಸತ್ತ ಹಂದಿಗಳು: ದುರ್ನಾತದಿಂದ ಬೇಸತ್ತ ವಾಹನ ಸವಾರರು….

ಸತ್ತ ಹಂದಿಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಹೋಗಿದ್ದು,  ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತುಂಬಾ ಕಿರಿಕಿರಿ ಉಂಟಾಗಿರುವ ಘಟನೆ ಮಧುರೆ ಹಾಗೂ ದೊಡ್ಡಬಳ್ಳಾಪುರ ರಸ್ತೆಯ ಕಾಡನೂರು ಕೈಮರ ಸಮೀಪ ನಡೆದಿದೆ….

ಸತ್ತ ಹಂದಿಗಳನ್ನು ರಸ್ತೆ ಪಕ್ಕದಲ್ಲೇ ಅಪರಿಚಿತರು ಬಿಸಾಡಿ ಹೋಗಿದ್ದರಿಂದ ದುರ್ನಾತ ಬೀರುತ್ತಿದೆ. ನೊಣಗಳ ಕಾಟ, ಹಂದಿ‌ ತಿನ್ನಲು ನಾಯಿಗಳು ಹಾಗೂ ಇತರೆ ಪ್ರಾಣಿಗಳು ಬಂದು ಕಚ್ಚಾಡುತ್ತಾ ರಸ್ತೆ ಮಧ್ಯೆದಲ್ಲಿ ವಾಹನಗಳಿಗೆ ಅಡ್ಡಿಯಾಗಿ ಬಂದು ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗಿದೆ..

ಅಪಘಾತದ ಭಯ, ದುರ್ನಾತದಿಂದ ವಾಹನ ಸವಾರರು ನಿತ್ಯ ಜೀವಭಯದಲ್ಲಿ ಸಂಚಾರ ಮಾಡುತ್ತಿದ್ದಾರೆ…. ಕೋಳಿ ತ್ಯಾಜ್ಯಾ, ಸತ್ತೋಗಿರುವ ಪ್ರಾಣಿಗಳನ್ನು ರಸ್ತೆ ಬದಿಯಲ್ಲಿ‌ ಹಾಕುವ ಪ್ರವೃತ್ತಿ ಇನ್ನೂ ಮುಂದುವರಿಯುತ್ತಿದೆ… ಇದಕ್ಕೆ ಕಡಿವಾಣ ಹಾಕಬೇಕಾಗಿದೆ…ಎಂದು ಸ್ಥಳೀಯರು ಮನವಿ ಮಾಡಿದ್ದಾರೆ….

Leave a Reply

Your email address will not be published. Required fields are marked *

error: Content is protected !!