ಸೂಕ್ತ ಸಮಯದಲ್ಲಿ ಸರಿಯಾದ ವೈದ್ಯರನ್ನು ಭೇಟಿ ಮಾಡಿದರೆ ಅನಗತ್ಯ ಪರೀಕ್ಷೆಗಳು ತಪ್ಪಿಸಿಕೊಳ್ಳಬಹುದು- ಡಾ.ಮಂಜುನಾಥ್ ಬಿ.ಜಿ

ಬೆಂಗಳೂರು, ವೈಟ್‌ ಫಿಲ್ದ್‌ : ಮಧ್ಯಪ್ರಾಚ್ಯದ ರೋಗಿಯೊಬ್ಬರು ಕೆಮ್ಮು, ಉಸಿರಾಟದ ತೊಂದರೆ ಮತ್ತು ಬಲ ಶ್ವಾಸಕೋಶದಲ್ಲಿ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರಾಥಮಿಕ ಎಕ್ಸ್-ರೆ ಮತ್ತು ಸಿಟಿ ಸ್ಕ್ಯಾನ್‌ನಲ್ಲಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂದು ಅನುಮಾನ ವ್ಯಕ್ತವಾಗಿತ್ತು.

ವಾರ್ಷಿಕ ಹೆಲ್ತ್‌ ಚೆಕ್‌ ಅಪ್‌ ಮಾಡಿಸಿದಾಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್‌ ಇದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು .ಆದರೆ, ಅವರು ಮೆಡಿಕವರ್ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ. ಮಂಜುನಾಥ್ ಬಿ.ಜಿ, ಅವರನ್ನು ಸಂಪರ್ಕಿಸಿದಾಗ, ಡಾಕ್ಟರ್ ಅವರು ಎಲ್ಲಾ ವರದಿಗಳನ್ನು ಪರಿಶೀಲಿಸಿ ಶ್ವಾಸಕೋಶದ ಕ್ಯಾನ್ಸರ್ ಇಲ್ಲ ಎಂದು ಖಚಿತಪಡಿಸಿದರು. ಮುಂದಿನ ತಪಾಸಣೆಯಲ್ಲಿ, ರೋಗಿಗೆ ಅಲರ್ಜಿ ಬ್ರಾಂಕೋಪಲ್ಮನರಿ ಆಸ್ಪರ್ಜಿಲೋಸಿಸ್ (ABPA) ಎಂಬ ಸ್ಥಿತಿ ಕಂಡುಬಂತು.

ಡಾಕ್ಟರ್ ಮಂಜುನಾಥ್ ಸೂಕ್ತ ಔಷಧೋಪಚಾರವನ್ನು ನೀಡಿದ ಪರಿಣಾಮ, ಕೇವಲ ಎರಡು ವಾರಗಳಲ್ಲಿ ರೋಗಿಯ ಎಕ್ಸ್-ರೆ ವರದಿ ಸಂಪೂರ್ಣವಾಗಿ ಸಾಮಾನ್ಯಗೊಂಡಿತು ಮತ್ತು ಅವರು ಪೂರ್ಣ ಚೇತರಿಸಿಕೊಂಡರು.

ಈ ಕುರಿತು ಮಾತನಾಡಿದ ಡಾ. ಮಂಜುನಾಥ್ ಬಿ.ಜಿ,
“ಸರಿಯಾದ ಸಮಯಕ್ಕೆ ಸೂಕ್ತ ವೈದ್ಯರ ಹತ್ರ ಚಿಕಿತ್ಸೆ ಪಡೆದರೇ ಅನಗತ್ಯವಾಗಿ ಟೆಸ್ಟ್‌ ಮಾಡಿಸುವ ಅವಶ್ಯಕತೆ ಇರೋದಿಲ್ಲ.” ಎಂದರು.

Leave a Reply

Your email address will not be published. Required fields are marked *

error: Content is protected !!