
ಕ್ರಿಕೆಟ್ ಬೆಟ್ಟಿಂಗ್, ಶೋಕಿಗಾಗಿ ಒಂಟಿ ಮನೆಗಳಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬರೋಬ್ಬರಿ 90 ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸಲಾಗಿದೆ…
ಶ್ರೀರಂಗಪಟ್ಟಣ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ದರೋಡೆಕೋರರನ್ನು ಬಂಧನ ಮಾಡಲಾಗಿದೆ….
ಈ ಕಿರಾತಕರು ಒಂಟಿ ಮನೆ ಟಾರ್ಗೆಟ್ ಮಾಡಿ ದರೋಡೆ ಮಾಡ್ತಿದ್ದರು. ನವೆಂಬರ್ 6ರಂದು ಕೂಡಲಕುಪ್ಪೆ ಗ್ರಾಮದ ಮೀನಾಕ್ಷಿ ಹಾಗೂ ಪಕ್ಕದ ಸುವರ್ಣ ಎಂಬುವರ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು. ಜೊತೆಗೆ ಮತ್ತೊಂದು ಮನೆಯಲ್ಲೂ ರಾಬರಿ ಕೂಡ ಮಾಡಿದ್ದರು.
ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಪತ್ತೆಗಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿತ್ತು. ಪ್ರಕರಣದಲ್ಲಿ 6 ಜನ ಆರೋಪಿತರಲ್ಲಿ 5 ಜನ ಆರೋಪಿಗಳ ದಸ್ತಗಿರಿ ಮಾಡಲಾಗಿದೆ.
ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಗಂಗರಾಜು@ಗಂಗ (56) ಬಂಧಿತ ಪ್ರಮುಖ ಆರೋಪಿ. ಉಳಿದಂತೆ ರಾಮನಗರ ಟೌನ್ ನ ಮಂಜುನಾಥ್ @ಕೆಂಪ(25), ಶಶಿಕುಮಾರ್@ಗೆಂಡೆ(25), ಕೃಷ್ಣ@ರಾಜು(25), ಮದ್ದೂರು ಟೌನ್ ನ ಸಂದೇಶ್@ಕಲರ್(27) ಬಂಧಿತರು.
ಗಂಗರಾಜು@ಗಂಗ ಎಂಬ ಪ್ರಮುಖ ಆರೋಪಿ ಒಂಟಿ ಮನೆ ದರೋಡೆ ಸೇರಿ ಬರೋಬ್ಬರಿ 90 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಎಲ್ಲಾ ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸಾಲ ಮಾಡಿಕೊಂಡಿದ್ದರು.
ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದ ಗ್ಯಾಂಗ್. ಸಂದೇಶ್ ಎಂಬ ಆರೋಪಿ ಹೆಣ್ಣು ಮಕ್ಕಳು ಇರ್ತಿದ್ದ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಗುರುತಿಸುತ್ತಿದ್ದ. ನಂತರ ಪ್ಲಾನ್ ಮಾಡಿ ಒಂಟಿ ಮನೆ ದರೋಡೆ ಮಾಡ್ತಿದ್ದ ಖತರ್ನಾಕ್ ಗಳು.
ಬಂಧಿತರಿಂದ 5.5 ಲಕ್ಷ ಮೌಲ್ಯದ 55 ಗ್ರಾಂ ಚಿನ್ನಾಭರಣ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘನೆ ಮಾಡಿದ್ದಾರೆ.