ಗೀತಂ ಯೂನಿವರ್ಸಿಟಿಯಲ್ಲಿ ಪ್ರಸಿದ್ಧ ಪ್ರಸಿದ್ಧ ಅಸ್ಸಾಮಿ ನೃತ್ಯಶಿಲ್ಪಿ ಡಾ.ಅನ್ವೇಸಾ ಮಹಂತ‌ ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಗೀತಂ ಯೂನಿವರ್ಸಿಟಿಯಲ್ಲಿ SPICMACAY (ಯುವ ಸಮುದಾಯದ ನಡುವೆ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಂಘ) ಕ್ಲಬ್ ವತಿಯಿಂದ ಇಂದು ಪ್ರಸಿದ್ಧ ಅಸ್ಸಾಮಿ ನೃತ್ಯಶಿಲ್ಪಿ ಡಾ. ಅನ್ವೇಸಾ ಮಹಂತ ಅವರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮೂಲದ ಶಾಸ್ತ್ರೀಯ ನೃತ್ಯ ರೂಪ ಸತ್ರೀಯ ನೃತ್ಯದ ಮನೋಹರ ಪ್ರದರ್ಶನವಿತ್ತು, ಇದು ಸೂಕ್ಷ್ಮ ಪಾದಚಲನ, ಸೌಮ್ಯ ಭಾವಾಭಿನಯ ಮತ್ತು ಕಥನಾತ್ಮಕ ಶೈಲಿಗೆ ಪ್ರಸಿದ್ಧವಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಡಾ.ಮಹಂತ ಅವರ ನೃತ್ಯ ಪ್ರದರ್ಶನ ಮೂಲಕ ಅಸ್ಸಾಂನ ಸಮೃದ್ಧವಾದ ಸಾಂಸ್ಕೃತಿಕ ಪರಂಪರೆಯನ್ನು ತಿಳಿದುಕೊಂಡರು.

ನೃತ್ಯ ಪ್ರದರ್ಶನದ ನಂತರ, ಡಾ. ಮಹಂತ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ತಮ್ಮ ಸತ್ರೀಯ ನೃತ್ಯ ಯಾತ್ರೆ, ನೃತ್ಯ ರೂಪದ ವಿಶಿಷ್ಟತೆಗಳು ಮತ್ತು ಭಾರತೀಯ ಶಾಸ್ತ್ರೀಯ ಕಲೆಯನ್ನು ಉಳಿಸುವ ಹಾಗೂ ಪ್ರಚಾರ ಮಾಡುವ ಮಹತ್ವವನ್ನು ಹಂಚಿಕೊಂಡರು.

ಯುವ ಸಮುದಾಯದ ನಡುವೆ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಹತ್ತಿರವಾಗಿ ಪರಿಚಯಿಸುವ SPICMACAY, ವಿದ್ಯಾರ್ಥಿಗಳಿಗೆ ವಿಶ್ವ ಮಟ್ಟದ ಪ್ರದರ್ಶನಗಳನ್ನು ಅನುಭವಿಸಲು ಮತ್ತು ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತಿದೆ.

ಈ ಕಾರ್ಯಕ್ರಮದಲ್ಲಿ ಗೀತಂ ಯೂನಿವರ್ಸಿಟಿಯ ಕ್ಯಾಂಪಸ್ ಲೈಫ್ ನಿರ್ದೇಶಕಿ ರೀಮಾ ಚೌಧರಿ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!