
CMS ಕಂಪೆನಿಯಲ್ಲಿ ಗೋಪಿ ಎಂಬಾತ ಕೆಲಸಕ್ಕಿರ್ತಾನೆ. ವೆಹಿಕಲ್ ಅಲರ್ಟ್ ಮಾಡೋ ಕೆಲಸವನ್ನ ಮಾಡ್ಕೊಂಡಿದ್ದ. ಈ ಹಿಂದೆ CMS ಕಂಪೆನಿಯಲ್ಲಿ ಓಲ್ಡ್ ಎಂಪ್ಲಾಯ್ ಯಾಗಿದ್ದವ್ನು ಜೇವಿಯರ್. ಕಮ್ಮನಹಳ್ಳಿಯ ಜೇವಿಯರ್ ಗೆ ಗೋಪಿ ಆತ್ಮೀಯ ಸ್ನೇಹಿತ. ಪ್ರತೀ ಬಾರಿಯೂ ಎಣ್ಣೆಗೆ ಸಿಟ್ಟಿಂಗ್ ಹಾಕ್ದಾಗ ಜೇವಿಯರ್ ಹಾಗೂ ಗೋಪಿ ಕೋಟಿ ಕೋಟಿ ಹಣದ ಬಗ್ಗೆ ಡಿಸ್ಕಸ್ ಮಾಡ್ತಿದ್ರು. ಹೀಗಿದ್ದ ಜೇವಿಯರ್ ಕಾನ್ಸ್ ಟೇಬಲ್ ಅಣ್ಣಪ್ಪನ ಬಳಿ CMS ವಾಹನವನ್ನ ಹೈಜಾಕ್ ಮಾಡೋಕೆ ಸ್ಕೆಚ್ ಕೇಳಿದ್ದ. ಪಿಸಿ ಅಣ್ಣಪ್ಪ 15 ದಿನಗಳ ಕಾಲ ಸ್ಕೆಚ್ ಹಾಕಿ ನೀಲಿನಕ್ಷೆ ರೆಡಿಮಾಡಿದ್ದ. ಅದರಂತೆ ಬಾಣಸವಾಡಿಯಲ್ಲಿ ಇನ್ನೋವಾ ಕಾರನ್ನ ಬಾಡಿಗೆಗೆ ಪಡೆಯಲಾಗುತ್ತೆ. ನಂಬರ್ ಪ್ಲೇಟ್ ಗಳನ್ನ ಅರೆಂಜ್ ಮಾಡ್ಕೊಂಡು ಟೀಂ ಕೂಡ ಸೆಟ್ ಆಗುತ್ತೆ.
ಅಫೆನ್ಸ್ ಮಾಡೋ ದಿನ ರವಿ, ರಾಕೇಶ, ನವೀನ ಸೇರಿ ಒಟ್ಟು ಐದು ಮಂದಿ ರಾಬರಿಗೆ ರೆಡಿಯಾಗ್ತಾರೆ. ಅದರಂತೆ CMS ವಾಹನವನ್ನ ತಡೆದು RBI ಅಧಿಕಾರಿಗಳೆಂದು 7.11 ಕೋಟಿ ರಾಬರಿ ಮಾಡ್ತಾರೆ. CMS ವಾಹನದಲ್ಲಿ ಪ್ರತೀ ವಾರದ ಬುಧವಾರ, ಗುರುವಾರ 5 ಕೋಟಿ ಹಣ ಸಾಗಿಸಲಾಗುತ್ತೆ ಎಂಬ ಮಾಹಿತಿ ಗೋಪಿ ಕೊಟ್ಟಿದ್ದ. ಅದರಂತೆ ಬುಧವಾರವೇ ಪ್ಲ್ಯಾನ್ ಪಕ್ಕಾ ಆಗಿ ರಾಬರಿ ಮಾಡಲಾಗುತ್ತೆ.
ಇಲ್ಲಿ ರವಿ ಹಾಗೂ ರಾಕೇಶ್ ಇಬ್ರೂ ರಿಟೈರ್ಡ್ ಮಿಲಿಟರಿ ಮೆನ್ ನ ಮಕ್ಕಳು ಆಂಧ್ರದ ಚಿತ್ರಪಲ್ಲಿಯವರಾಗಿರುವ ಆರೋಪಿಗಳಾದ ರವಿ ಹಾಗೂ ರಾಕೇಶ್.
ಆಂಧ್ರದ ಚಿತ್ರಪಲ್ಲಿಯ ರವಿ ಮನೆಯಲ್ಲಿ ಹಣವನ್ನ ಇಡೋಕೆ ಪ್ಲ್ಯಾನ್ ರೂಪಿಸಲಾಗಿತ್ತು. ಸ್ಕೈಪ್ ನಲ್ಲೇ ಕಾಲ್ ನಲ್ಲೇ ಅಣ್ಣಪ್ಪನನ್ನ ಕಾಂಟ್ಯಾಕ್ಟ್ ಮಾಡ್ತಿದ್ದ ರವಿ.
ಹೊಸಕೋಟೆ ಟೋಲ್ ಮೂಲಕ ಹೋಗದೆ ಬೂದಿಗೆರೆ ಕ್ರಾಸ್ ನ ಮೂಲಕ ಆಂಧ್ರಕ್ಕೆ ಪಲಾಯನ. ಆದ್ರೆ, ಪೊಲೀಸರ ಭಯದಲ್ಲಿ ಚಿತ್ತೂರು ಬಳಿಯೇ ಕಾರನ್ನ ಬಿಟ್ಟು ಎಸ್ಕೇಪ್ ಆಗಿದ್ರು. ಇನ್ನು ರವಿ ಪೊಲೀಸರ ಹಾದಿ ತಪ್ಪಿಸಲು ಚೆನ್ನೈ ನ ಮೆಟ್ರೋ ನಿಲ್ದಾಣದ ಬಳಿ ಮೊಬೈಲ್ ಸ್ವಿಚ್ ಆಫ್ ಮಾಡ್ತಾನೆ. ನಂತರ ಆಂಧ್ರಕ್ಕೆ ಎಸ್ಕೇಪ್ ಆಗಿದ್ದ ರವಿ ಹಾಗೂ ರಾಕೇಶ. ಚಿತ್ತೂರಿನ ಕಾಡಿನಲ್ಲಿ ಖಾಲಿ ಟ್ರಂಕನ್ನ ಎಸೆದು ಪರಾರಿಯಾಗಿದ್ದ ರವಿ ಟೀಂ.
ಇದೀಗ ಎಲ್ಲಾ ಆರೋಪಿಗಳನ್ನ ಬಂಧಿಸಿ 5 ಕೋಟಿ 76 ಲಕ್ಷ ರಿಕವರಿ ಮಾಡಿರುವ ಪೊಲೀಸರು. CCB ಹಾಗೂ ದಕ್ಷಿಣ ವಿಭಾಗದ ಪೊಲೀಸರು ಆರೋಪಿಗಳನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
7 ಕೋಟಿ 11 ಲಕ್ಷ ಹಣ ಮಿಸ್ ಆಗಿತ್ತು. ಈ ಕುರಿತು ಕಂಟ್ರೋಲ್ ರೂಂ ಗೆ ಕರೆ ಬಂತು. ಪ್ರಕರಣದ ಕುರಿತು ಒಂದೂವರೆ ತಾಸು ತಡವಾಗಿ ಮಾಹಿತಿ ಬಂತು. ಮೊದಲು ಡಿಜೆ ಹಳ್ಳಿ ಅಂತ ಮಾಹಿತಿ ಬಂತು. ನಂತರ ಸೌತ್ ಡಿಸಿಪಿ ಅವರಿಗೆ ಮಾಹಿತಿ ಬಂತು. ಬೆಂಗಳೂರು ಸಿಟಿ ಪೊಲೀಸ್ ಕಂಟ್ರೋಲ್ ರೂಂ ನಿಂದ ತಕ್ಷಣ ನಾಕಾಬಂಧಿ ಹೊಯ್ಸಳ ಎಲ್ಲ ಡಿಸಿಪಿ ಎಸ್ಪಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಲಾಯ್ತು. ಎರಡರಿಂದ ಮೂರು ವಾಹನದಲ್ಲಿ ಅಮೌಂಟ್ ಹೋಗಿದೆ ಅಂತ ಮೆಸೇಜ್ ಕೊಟ್ವಿ. ಮೊದಲ ಎರಡು ಮೂರು ಗಂಟೆಯಲ್ಲಿ ತುಂಬಾ ಪ್ರಯತ್ನ ಪಟ್ವಿ. ತುಂಬಾ ಚಾಲೆಂಜಿಂಗ್ ಕೇಸ್ ಆಗಿತ್ತು. ಎಲ್ಲೆಲ್ಲಿ ಸಿಸಿಟಿವಿ ಇಲ್ಲ ಅದನ್ನ ಆರೋಪಿಗಳು ಗಮನ್ಸಿಸಿದ್ರು. ಆರೋಪಿಗಳು ಮೊಬೈಲ್ಪೊನ್ ಬಳಸಿಲ್ಲ. ಬೇರೆ ಬೇರೆ ಭಾಷೆ ಬಳಸಿ ಮಾತಾಡಿದ್ದಾರೆ. CMS ಸಿಬ್ಬಂದಿ ನೀಡಿದ್ದ ಹಣದಲ್ಲಿ ಕರೆನ್ಸಿ ಸೀರಿಯಲ್ ಸಮೇತ ಕೊಟ್ಟಿರಲಿಲ್ಲ. ನವೆಂಬರ್ 19 ರಿಂದ 22 ರವರೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ 200 ಜನ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಕರ್ನಾಟಕ ಕೇರಳ ಆಂಧ್ರ ತೆಲಂಗಾಣ ತಮಿಳುನಾಡು ಗೋವಾದಲ್ಲಿ ನಮ್ಮ ಪೊಲೀಸರು ಹೋಗಿದ್ದಾರೆ. 5 ಕೋಟಿ 76 ಲಕ್ಷ ರಿಕವರಿ ಆಗಿದೆ. ಇನ್ನು ರಿಕವರಿ ಆಗಬೇಕು. ಅದರ ಬಗ್ಗೆ ಪ್ರಯತ್ನ ಮಾಡ್ತಿದ್ದೀವಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.
30 ಕ್ಕಿಂತ ಹೆಚ್ಚಿನ ಜನರನ್ನ ವಿಚಾರಣೆ ಮಾಡಿದ್ದೇವೆ. ಸದ್ಯ ಮೂವರನ್ನ ಅರೆಸ್ಟ್ ಮಾಡಿದ್ದೇವೆ. CMS ಸಂಸ್ಥೆಯ ವೆಹಿಕಲ್ ಇಂಚಾರ್ಜ್ ಗೋಪಿ, CMS ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಕಾನ್ಸ್’ಟೇಬಲ್ ಅಣ್ಣಪ್ಪನಾಯ್ಕ್ ಸದ್ಯ ಅರೆಸ್ಟ್ ಆಗಿದ್ದಾರೆ. 50 ಗಂಟೆಯಲ್ಲಿ 5.76 ಕೋಟಿ ರಿಕವರಿ ಆಗಿದೆ. ಇದರಲ್ಲಿ 6 ರಿಂದ 8 ಮಂದಿ ಶಾಮೀಲಾಗಿರುವ ಮಾಹಿತಿ ಇದೆ. ಒಂದು ಇನೋವಾ ಗಾಡಿ ಚಿತ್ತೂರು ಹೊರವಲಯದಲ್ಲಿ ಸಿಕ್ಕಿತ್ತು. ನಂಬರ್ ಪ್ಲೇಟ್ ನಕಲು ಇತ್ತು. ಕಮಾಂಡ್ ಸೆಂಟರ್ ನಿಂದ ವೆಹಿಕಲ್ ಚೇಸ್ ಮಾಡಿದ್ವಿ. ವಾಹನದ ಹಿಂದೆ Govt of India ಅಂತ ಬರೆದಿದ್ರು. ಬೆಂಗಳೂರು ಹೊರವಲಯದಿಂದ 5.76 ಕೋಟಿ ರಿಕವರಿ ಮಾಡಿದ್ದೇವೆ. ಫಿಂಗರ್ ಪ್ರಿಂಟ್ ಪೊರೆನ್ಸಿಕ್ ಎಲ್ಲ ಡಾಕ್ಯುಮೆಂಟ್ ಚೆನ್ನಾಗಿ ಬಂದಿದೆ. ಈ ಕೇಸ್ ನಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡೇ ಮಾಡ್ತೀವಿ. ಇದು ನಮಗೆ ಚಾಲೆಂಜಿಂಗ್ ಆಗಿದ್ದ ಕೇಸ್. ಡೇ ಟೈಮಲ್ಲಿ ಸಿಟಿಯಲ್ಲಿ ಈ ರೀತಿ ಕೇಸ್ ನಡೆದಿರಲಿಲ್ಲ. ಡಿಸಿಪಿ ಶ್ರೀಹರಿಬಾಬು ಹಾಗೂ ಡಿಸಿಪಿ ಲೋಕೇಶ್ ಹಗಲು ರಾತ್ರಿ ಶ್ರಮಪಟ್ಟಿ ಕೆಲಸ ಮಾಡಿದ್ದಾರೆ. ಡಿಸಿಪಿ ಗಳಿಗೆ ಹೆಚ್ಚುವರಿ ಆಯುಕ್ತ ವಂಶಿಕೃಷ್ಣ ಗೈಡ್ ಮಾಡಿದ್ರು. ಇನ್ನು ಕೆಲವರನ್ನ ಅರೆಸ್ಟ್ ಮಾಡೋದು ಬಾಕಿ ಇದೆ ಎಂದರು.
ಆರೋಪಗಳು ಮೂರು ತಿಂಗಳಿನಿಂದ ಪ್ಲಾನ್ ಮಾಡಿದ್ರು. ಕಳೆದ 15 ದಿನಗಳಿಂದ ಏರಿಯಾವನ್ನ ರೆಕ್ಕಿ ಮಾಡದ್ರು, ಎಲ್ಲೆಲ್ಲಿ ಸಿಸಿಟಿವಿ ಇಲ್ಲ ಅಲ್ಲಿ ರೆಕ್ಕಿ ಮಾಡಿದ್ದಾರೆ. ಈ ಕೇಸ್ ನಲ್ಲಿ CMS ನಿರ್ಲಕ್ಷ್ಯ ಕೂಡ ಇದೆ. ಆರ್.ಬಿ.ಐ ಗೈಡ್ ಲೈನ್ಸ್ ವೈಲೆಟ್ ಮಾಡಿದ್ದಾರೆ. ಪದೇ ಪದೇ ಜೆಪಿನಗರ ಕೋರಮಂಗಲ ರೂಟ್ ನಲ್ಲಿ ವಾಹನ ಹೋಗಿದೆ. ವಾಹನ ಇಂಚಾರ್ಜ್ ಇದರಲ್ಲಿ ಶಾಮೀಲಾಗಿದ್ದಾರೆ. ಜೆಪಿನಗರದಿಂದ ವೆಹಿಕಲ್ ಅಶೋಕ ಪಿಲ್ಲರ್ ಬಳಿ ಬಂದಾಗ ಗಾಡಿ ನಿಲ್ಲಿಸಿ ಆರ್.ಬಿ.ಐ ಆಫೀಸರ್ಸ್ ಇದಿವಿ ಆರ್.ಬಿ.ಐ ಗೆ ಕರೆದೊಯ್ದು ಹೆದರಿಸಿದ್ದಾರೆ. ಆರೋಪಿಗಳ ಪರವಾಗಿ ಕ್ಯಾಶ್ ವ್ಯಾನ್ ನಲ್ಲಿದ್ದ ಆರೋಪಿ ಗೋಪಿ ಇದ್ದ. ನಿಮ್ಹಾನ್ಸ್ ಬಳಿ ಕಸ್ಟೋಡಿಯನ್ ಹಾಗೂ ಗನ್ ಮ್ಯಾನ್ ಗಳನ್ನ ಇಳಿಸಿ ಹೋಗಿದ್ರು. ತನಿಖಾ ತಂಡಕ್ಕೆ ಐದು ಲಕ್ಷ ಬಹುಮಾನ ಘೋಷಣೆ. ಸದ್ಯ ಬಂಧಿತ ಮೂವರು ಆರೋಪಿಗಳು ಸಹ ಬೆಂಗಳೂರಿನವರು. ಬಂಧಿತರಲ್ಲಿ ಓರ್ವ CMS ವೆಹಿಕಲ್ ಇಂಚಾರ್ಜ್( ಗೋಪಿ) ಯಾವ ಗಾಡಿಯಲ್ಲಿ ಹೆಚ್ಚಿನ ಹಣ ಹೋಗತ್ತೆ, ಯಾವ ರೂಟ್ ಹೋಗತ್ತೆ ಅನ್ನೋದು ಈತ ನಿರ್ಧರಿಸ್ತಾನೆ ಎಂದು ಮಾಹಿತಿ ನೀಡಿದರು.