₹7.11 ಕೋಟಿ ಬೃಹತ್ ಹಗಲು ದರೋಡೆ ಪ್ರಕರಣ: ದರೋಡೆ ಎಸಗಿದ ಶಂಕಿತ ಆರೋಪಿಗಳಲ್ಲಿ ಆರು ಜನರ ಫೋಟೋ ಬಿಡುಗಡೆ

ಬೆಂಗಳೂರಿನ ಜಯದೇವ ಡೇರಿ ಸರ್ಕಲ್‌ನಲ್ಲಿ ನಿನ್ನೆ (ನ. 19) ಮಧ್ಯಾಹ್ನ ನಡೆದ ₹7.11 ಕೋಟಿ ಬೃಹತ್ ಹಗಲು ದರೋಡೆ ಪ್ರಕರಣದಲ್ಲಿ ಇದೀಗ ದೊಡ್ಡ ಬೆಳವಣಿಗೆ ಉಂಟಾಗಿದೆ. ದರೋಡೆ ಎಸಗಿದ ಶಂಕಿತ ಆರೋಪಿಗಳಲ್ಲಿ ಆರು ಜನರ ಸ್ಪಷ್ಟ ಫೋಟೋಗಳನ್ನು ಬೆಂಗಳೂರು ಪೊಲೀಸರು ಪಡೆದಿದ್ದಾರೆ. ಈ ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದ್ದು,  ಆರೋಪಿಗಳನ್ನ ಎಲ್ಲಾದರೂ ಕಂಡರೆ ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳೀಯ ಮೂಲಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ ಈ ಆರು ಶಂಕಿತರ ಫೋಟೋಗಳನ್ನು ಗುರುತಿಸಲಾಗಿದೆ. ದರೋಡೆ ದಿನದಂದು ಬಿಳಿ ಬಣ್ಣದ ಎರಡು ಇನ್ನೋವಾ ಕ್ರಿಸ್ಟಾ ಕಾರುಗಳಲ್ಲಿ ಬಂದಿದ್ದ ಗ್ಯಾಂಗ್‌ನಲ್ಲಿ ಒಟ್ಟು 7-8 ಜನ ಇದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಪೈಕಿ ಆರು ಜನರ ಫೋಟೋಗಳು ಲಭ್ಯವಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ.

ಮುಖಕ್ಕೆ ಮಾಸ್ಕ್ ಧರಿಸಿದ್ದರೂ ಸಿಸಿಟಿವಿಯಲ್ಲಿ ದೃಶ್ಯದಲ್ಲಿ ಕಾಣಿಸಿದಂತೆ 30-35 ವಯಸ್ಸಿನವರಾಗಿದ್ದಾರೆ. ಮತ್ತೊಬ್ಬ ಕೈಯಲ್ಲಿ ಕತ್ತಿ ಹಿಡಿದಿದ್ದ 28-32 ವಯಸ್ಸಿನ ವ್ಯಕ್ತಿಯಾಗಿದ್ದಾನೆ. ದರೋಡೆಯ ಸಮಯದಲ್ಲಿ ಕ್ಯಾಶ್ ವ್ಯಾನ್ ಬಳಿ 35-40 ವಯಸ್ಸಿನ ವ್ಯಕ್ತಿ ನಿಂತ್ತಿದ್ದಾನೆ. ಇನ್ನೋವಾ ಕಾರಿನ ಚಾಲಕ ಸ್ಥಾನದಲ್ಲಿ ಕಂಡಿದ್ದ 30ರ ವ್ಯಕ್ತಿ. ಎಸ್ಕೇಪ್ ಆಗುವಾಗ ಇನ್ನೋವಾ ಕಾರಿನಲ್ಲಿ ಕಂಡ ಇಬ್ಬರು ಯುವಕರು ಒಟ್ಟು 6 ರಿಂದ 7 ಮಂದಿ ಕೃತ್ಯದಲ್ಲಿ ಬಾಗಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಈ ಆರು ಜನರ ಫೋಟೋಗಳನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿ ಅಧಿಕೃತ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

 ಯಾರಿಗಾದರೂ ಈ ವ್ಯಕ್ತಿಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ 112ಗೆ ಕರೆ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇರಿಸಲಾಗುವುದು ಮತ್ತು ರಿವಾರ್ಡ್ ಘೋಷಿಸುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.

ದರೋಡೆ ನಡೆದ 48 ಗಂಟೆಗಳೊಳಗೇ ಈ ಫೋಟೋಗಳು ಲಭ್ಯವಾಗಿರುವುದು ಪೊಲೀಸರಿಗೆ ದೊಡ್ಡ ಬ್ರೇಕ್ ಥ್ರೂ ಎನ್ನಲಾಗುತ್ತಿದೆ. ಆದರೆ ಇನ್ನೂ ಆರೋಪಿಗಳನ್ನು ಬಂಧಿಸದಿರುವುದು ಆತಂಕ ಮೂಡಿಸಿದೆ. ಈ ಗ್ಯಾಂಗ್ ರಾಜ್ಯದಿಂದ ಹೊರಗೆ ತೆರಳಿರುವ ಸಾಧ್ಯತೆ ಇದ್ದು, ತಮಿಳುನಾಡು, ಕೇರಳ, ಮಹಾರಾಷ್ಟ್ರ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!