ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಕಳೆದ ರಾತ್ರಿ 11.30ರ ಸಮಯದಲ್ಲಿ ನಾರನಹಳ್ಳಿ ಬಳಿ ಸಂಭವಿಸಿದೆ.

ಮೃತ ದುರ್ದೈವಿಯನ್ನು ದೊಡ್ಡಬಳ್ಳಾಪುರ ನಗರದ ನಿವಾಸಿ ಶ್ರೇಯಸ್ (25 ವರ್ಷ) ಎಂದು ಗುರುತಿಸಲಾಗಿದೆ.

ದೊಡ್ಡಬಳ್ಳಾಪುರ ದಾಬಸ್‌ಪೇಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ನಾರನಹಳ್ಳಿ ಬಳಿ ಮುಂದೆ ಸಾಗುತ್ತಿದ್ದ ಲಾರಿ, ಏಕಾಏಕಿ ಎಡಬಲಕ್ಕೆ ತೆರಳಿದ ಕಾರಣ ಹಿಂದೆ ಬರುತ್ತಿದ್ದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಎಲೆಕ್ಟ್ರಿಕ್ ಕಾರು ತೀವ್ರ ಹಾನಿಗೊಳಗಾಗಿದ್ದು, ಕಾರಿನಲ್ಲಿದ್ದ ಶ್ರೇಯಸ್ ಸಾವನಪ್ಪಿದ್ದಾರೆ ತಿಳಿದುಬಂದಿದೆ.

ಈ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!