ಕಾಲಿಗೆ ಮೆಡಿಕಲ್ ಬ್ಯಾಂಡೇಜ್ ನಂತೆ ಸುತ್ತಿ, ಅದರೊಳಗೆ ಮರೆಮಾಚಿ ಚಿನ್ನ ಕಳ್ಳಸಾಗಣಿಕೆಗೆ ಯತ್ನಿಸಿದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ, ಆರೋಪಿಯಿಂದ 43 ಲಕ್ಷ ಮೌಲ್ಯದ 700 ಗ್ರಾಂ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.
ಮೇ 21 ರಂದು ಬ್ಯಾಂಕಾಕ್ ನಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಬಂದಿಳಿದ್ದಿದ್ದು, ಪ್ರಯಾಣಿಕನ ಚಲನವಲನಗಳನ್ನು ಹಾಗೂ ಪ್ರಯಾಣಿಕನ ಹಿನ್ನೆಲೆಯ ಮಾಹಿತಿ ಕಲೆಹಾಕಿದ ಕಂದಾಯ ಗುಪ್ತಚಾರ ನಿರ್ದೇಶನಾಲಯ (DRI) ಮತ್ತು ಆದಾಯ ತೆರಿಗೆ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಅಧಿಕಾರಿಗಳಿಗೆ ಸಂಶಯ ಮೂಡಿದೆ.
ಕೂಡಲೇ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿಯನ್ನ ನೀಡಿದ್ದಾರೆ, ವಿಚಾರಣೆಗಾಗಿ ಆರೋಪಿತ ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡಿದ್ದಾರೆ, ತಪಾಸಣೆ ನಡೆಸಿದ್ದಾಗ ಆರೋಪಿ ತನ್ನ ಕಾಲಿಗೆ ಮೆಡಿಕಲ್ ಟೇಪ್ ಸುತ್ತಿಗೊಂಡಿದ್ದ, ಅದರೊಳಗೆ ಮರೆಮಾಚಿ ಚಿನ್ನವನ್ನ ಅಡಗಿಸಿಟ್ಟಿದ್ದ, ಆತನಿಂದ 700 ಗ್ರಾಂ ತೂಕದ 43,65,291 ರೂಪಾಯಿ ಮೌಲ್ಯದ ಎರಡು ಚಿನ್ನದ ಬಿಸ್ಕತ್ತು ಮತ್ತು ಚಿನ್ನದ ಚೈನ್ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಯನ್ನ ಅಧಿಕಾರಿಗಳು ಮುಂದುವರೆಸಿದ್ದಾರೆ.
ಕೈ ಕಡಗಕ್ಕೆ ರೇಡಿಯಮ್ ಲೇಪಿಸಿ ಚಿನ್ನ ಕಳ್ಳಸಾಗಣೆ
ಮೇ 20 ರಂದು ಬ್ಯಾಂಕಾಕ್ ನಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನ ಮೇಲೆ ಸಂಶಯ ಬಂದ ಹಿನ್ನಲೆ, ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾಗ, ಪ್ರಯಾಣಿಕನ ಬಳಿ ಕೈ ಕಡಗ ಪತ್ತೆಯಾಗಿದೆ, ಚಿನ್ನದ ಕಡಗಕ್ಕೆ ರೇಡಿಯಮ್ ಲೇಪಿಸಿ ಕಳ್ಳ ಸಾಗಣಿಕೆಗೆ ಯತ್ನಸಿದ್ದ, ಆರೋಪಿಯಿಂದ 499.87 ಗ್ರಾಂ ತೂಕದ 31,14,190 ರೂಪಾಯಿ ಮೌಲ್ಯ ಚಿನ್ನ ವಶಕ್ಕೆ ಪಡೆಯಲಾಗಿತ್ತು.