ವಿಶ್ವದ ಎತ್ತರದ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಕಾಲ್ನಡಿಗೆ ಜಾಥಾ

ಕೋಲಾರ: ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 200 ಮೀಟರ್ ಎತ್ತರದ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿ ಸೋಮವಾರ ಭೀಮ್ ಪ್ರಜಾ ಸಂಘದ ವತಿಯಿಂದ ನಗರದ ನಚಿಕೇತನ ನಿಲಯದಿಂದ ಎರಡನೇ ಹಂತದ ಸ್ವಾಭಿಮಾನಿಗಳ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು,

ಜಾಥವು ಕೋಲಾರ ನಗರದಲ್ಲಿ ಪ್ರಚಾರಗೊಳಿಸಿ ನಂತರ ಹೊಸಕೋಟೆ ಮಾರ್ಗದಿಂದ ಸಾಗಿ ನವೆಂಬರ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸೇರಲಿದೆ ಅಂದು ರಾಜ್ಯಾದ್ಯಂತ ಸಂಘಟನೆಯ ಕಾರ್ಯಕರ್ತರು ಮುಖಂಡರು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ

ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ವೈಟ್ ಫೀಲ್ಡ್ ಮುರಗೇಶ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಬೆಂಗಳೂರು ಹೃದಯ ಭಾಗದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆಗಾಗಿ ಸಾಕಷ್ಟು ಬಾರಿ ಪ್ರತಿಭಟನೆ ಹೋರಾಟ ಕಾಲ್ನಡಿಗೆಯ ಮೂಲಕ ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಲಿಲ್ಲ ಹಿಂದೆ ಬೀದರ್ ನಿಂದ ಬೆಂಗಳೂರಿಗೆ ಜಾಥಾ ಮೂಲಕ ಒತ್ತಾಯಿಸಿದರು ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿಲ್ಲದ ಭಾಗವಾಗಿ ಎರಡನೇ ಹಂತದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು

ರಾಜ್ಯದ ಕಾಂಗ್ರೆಸ್ ಸರ್ಕಾರವು ದಲಿತರ, ಹಿಂದುಳಿದ ವರ್ಗಗಳ ಅದರಲ್ಲೂ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರ ಪರವಾಗಿ ಅಂತ ಹೇಳುವ ಸಿದ್ದರಾಮಯ್ಯ ಪುತ್ಥಳಿ ನಿರ್ಮಾಣಕ್ಕೆ ಯಾಕೆ ವಿಳಂಬ ವಹಿಸಿದ್ದಾರೆ ರಾಜ್ಯ ಸರ್ಕಾರವು ದಲಿತರ ಅಭಿವೃದ್ಧಿಗೆ ಇರುವ ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಹಣವನ್ನು ಪಂಚ ಗ್ಯಾರಂಟಿಗಳಿಗೆ ಹಣ ಬಳಕೆ ಮಾಡಿಕೊಂಡಿದ್ದಾರೆ ದಲಿತರ ಬಗ್ಗೆ ಗೌರವ ಇದ್ದರೆ ಕೂಡಲೇ ಪುತ್ಥಳಿ ಸ್ಥಾಪನೆಗೆ ಮುಂದಾಗಲಿ ಇಲ್ಲದೇ ಹೋದರೆ ಪ್ರಾರಂಭ ಮಾಡುವ ತನಕ ಫ್ರೀಡಂ ಪಾರ್ಕ್‌ ನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯ ಅಧ್ಯಕ್ಷ ಮರಿಯಪ್ಪ, ಭೀಮ್ ಪ್ರಜಾ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ್, ಮಹಿಳಾ ಮುಖಂಡರಾದ ಶೋಭಾ, ಯುವ ಘಟಕದ ಅಧ್ಯಕ್ಷ ರಾಕೇಶ್ ಅಲ್ಪಸಂಖ್ಯಾತ ಮುಖಂಡರಾದ ಸದ್ದೀವುಲ್ಲಾ, ಅಸೇನ್, ಪ್ರಿಯಾ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!