ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ “ಅಕ್ಕಪಡೆ” ಯೋಜನೆ ಅನುಷ್ಠಾನಗೊಳಿಸಲು ಖಾಲಿ ಇರುವ 5 ಹುದ್ದೆಗಳಿಗೆ ಅರ್ಹ ಮಹಿಳಾ ಎನ್.ಸಿ.ಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನವೆಂಬರ್ 13 ರೊಳಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 206, 2 ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ಇಲ್ಲಿ ಅರ್ಜಿ ಪಡೆದು ಸಲ್ಲಿಸುವುದು.

ಅಕ್ಕಪಡೆ” ತಂಡದ ಮಹಿಳಾ NCC Cadets ಗಳ ಆಯ್ಕೆಗೆ NCC ‘C’ Certificate ಹೊಂದಿರುವ 35-45 ವಯೋಮಾನದ ಮಹಿಳಾ NCC ಅಭ್ಯರ್ಥಿಯಾಗಿ, ದೈಹಿಕ ಸದೃಢತೆ ಹೊಂದಿರಬೇಕು. ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುವುದು. ಉತ್ತಮ ನಡವಳಿಕೆ,ಸಂವಹನ ಕಲೆ, ಕಾರ್ಯದಕ್ಷತೆ ಉಳ್ಳವರಾಗಿರಬೇಕು. Shift ನಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು(7.00 ರಿಂದ ಸಂಜೆ 8.00 ರವರೆಗೆ 0 ಪಾಳಿಗಳಲ್ಲಿ ಅಂದರೆ ಬೆಳಿಗ್ಗೆ 7.00 ರಿಂದ ಮಧ್ಯಾಹ್ನ 2.00 ರವರೆಗೆ ಮತ್ತು ಮಧ್ಯಾಹ್ನ 2.00 ರಿಂದ ರಾತ್ರಿ 8.00 ರವರೆಗೆ). ಗುತ್ತಿಗೆ ಅವಧಿ 11 ತಿಂಗಳಿಗೆ ಸೀಮಿತವಾಗಿದ್ದು, ಕರ್ತವ್ಯ ನಿರ್ವಹಣೆ ತೃಪ್ತಿಕರವಾಗಿದ್ದಲ್ಲಿ ಸೇವೆಯನ್ನು ಮುಂದುವರೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೂರವಾಣಿ ಸಂಖ್ಯೆ :080-29787445 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!