
ನಾಳೆ (ನ.1) ಕನ್ನಡ ರಾಜ್ಯೋತ್ಸವ ಹಿನ್ನೆಲೆ ನಾಡಿನೆಲ್ಲೆಡೆ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಫುಲ್ ತಯಾರು ಮಾಡಿಕೊಳ್ಳಲಾಗಿದೆ. ಅದರಂತೆ ಇದೀಗ ರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸುವುದಕ್ಕಾಗಿ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ರಾಜ ಗೋಪುರಕ್ಕೆ ಬಣ್ಣ ಬಣ್ಣದ ವಿದ್ಯುತ್ ಲೈಟ್ಸ್ ಗಳಿಂದ ಅಲಂಕರಿಸಲಾಗಿದೆ.

ಹೌದು, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ರಾಜ ಗೋಪುರ ಚಿತ್ತಾರದ ಬೆಳಕಿನಿಂದ ಕಂಗೊಳಿಸುತ್ತಿದೆ. ನಾಡ ಧ್ವಜ, ರಾಷ್ಟ್ರ ಧ್ವಜಗಳ ಬಣ್ಣಗಳ ಮೂಲಕ ಬೆಳಕಿನ ಅಲಂಕಾರ ಮಾಡಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಗೋಪುರದ ಬೆಳಕು ಕಂಡು ಭಕ್ತಾಧಿಗಳು ಫುಲ್ ಖುಷ್ ಆಗಿದ್ದು, ಸೆಲ್ಫಿ ಫೋಟೊಗಳಿಗಾಗಿ ಮುಗಿ ಬಿದ್ದಿದ್ದಾರೆ.