
ಶಾಸಕ ಧೀರಜ್ ಮುನಿರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರ್ ಆನಂದ್, ಟಿಎಪಿಎಂಸಿಎಸ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ (ಎನ್ ಡಿಎ) ಮೈತ್ರಿ ಘೋಷಣೆ ಆದ ಮೇಲೆ ವೋಟ್ ಹಾಕಿ. ಇಲ್ಲದಿದ್ದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಮಾತ್ರ ವೋಟ್ ಹಾಕಿ ಎಂದು ಹೇಳಿದರು.
ಎನ್ ಡಿ ಎ ಮಾಡಿಕೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆದೇಶವಿದೆ. ಆದರೆ ಸ್ಥಳೀಯ ಶಾಸಕ ಧೀರಜ್ ಮುನಿರಾಜ್ ಅವರು ಅಸಂಬದ್ಧವಾಗಿ ಮೈತ್ರಿ ಮಾಡಿಕೊಂಡು ಜೆಡಿಎಸ್ ಮತದಾರರನ್ನು ದಿಕ್ಕುತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ….
ಏಕಪಕ್ಷೀಯವಾಗಿ ಅವರ ಇಚ್ಛೆಯಾಗಿ ಶಾಸಕ ಧೀರಜ್ ಮುನಿರಾಜ್ ನಡೆದುಕೊಳ್ಳುತ್ತಿದ್ದಾರೆ. ದೇವೇಗೌಡರ ಆದೇಶ ಉಲ್ಲಂಘನೆ ಮಾಡಿ ಮೈತ್ರಿ ಮಾಡಿಕೊಂಡು ನಮ್ಮಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ನಮ್ಮನೆಗೂ ಮೂರು ವೋಟ್ ಇವೆ. ಇದೂವರೆಗೂ ನಮ್ಮನಗೆ ಬಿಜೆಪಿಯವರು ವೋಟ್ ಕೇಳೋದಕ್ಕೆ ಬಂದಿಲ್ಲ. ಕೇವಲ ಜೆಡಿಎಸ್ ನವರು ಬಂದಿದ್ದಾರೆ. ಇದನ್ನ ಎನ್ ಡಿಎ ಮೈತ್ರಿ ಅಂತಾರಾ ಎಂದು ಹೇಳಿದರು..
ಇದೂವೆರೆಗೂ ಎನ್ ಡಿಎ ಮೈತ್ರಿಕೂಟದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿಲ್ಲ. ಮತದಾರರು, ರೈತರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಎನ್ ಡಿಎ ಮೈತ್ರಿಯಾದರೆ ಎಲ್ಲರಿಗೂ ವೋಟ್ ಹಾಕಬಹುದು ನಮ್ಮದೇನು ಅಭ್ಯಂತರ ಇರುವುದಿಲ್ಲ. ಇಲ್ಲ ಅಂದ್ರೆ ನಮ್ಮ ಜೆಡಿಎಸ್ ನವರಿಗೆ ಮಾತ್ರ ವೋಟ್ ಹಾಕಿ ಎಂದು ತಿಳಿಸಿದರು.