
ಬೆಳೆಗಳಿಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ತಾಯಿ ಮಗ ಸಾವನ್ನಪ್ಪಿದ ದುರಂತ ಘಟನೆ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ತಾಯಿ ನೀಲಮ್ಮ, ಮಗ ಹರೀಶ್ ಮೃತ ದುರ್ದೈವಿಗಳು.
ನಿನ್ನೆ ಮಧ್ಯಾಹ್ನ ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸುತ್ತಿದ್ದರು. ಜಮೀನಿನ ಪಕ್ಕದಲ್ಲೇ ಇರುವ ಸ್ಮಶಾನದಲ್ಲಿ ಹೈಟೆನ್ಷನ್ ವಿದ್ಯುತ್ ಸಂಪರ್ಕಕ್ಕೆ ಗ್ರೌಂಡಿಂಗ್ ಮಾಡಲಾಗಿದೆ. ಸ್ಮಶಾನಕ್ಕೆ ಅಳವಡಿಸಿರುವ ಬೇಲಿಗೆ ಗ್ರೌಂಡಿಂಗ್ ವೈರ್ ಸಂಪರ್ಕಿಸಿದೆ. ಔಷಧಿ ಸಿಂಪಡಿಸುವ ವೇಳೆ ಬೇಲಿ ಬಳಿ ಬಂದಾಗ ನೀಲಮ್ಮ ಗೆ ವಿದ್ಯುತ್ ಸ್ಪರ್ಷಿಸಿದೆ. ತಾಯಿಯ ನೆರವಿಗೆ ಧಾವಿಸಿದ ಹರೀಶ್ ಗೂ ವಿದ್ಯುತ್ ಸ್ಪರ್ಷಿಸಿದೆ. ತಾಯಿ ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ರಾತ್ರಿ 8 ಗಂಟೆ ಆದರೂ ತಾಯಿ ಮಗ ಮನೆಗೆ ಹಿಂದಿರುಗಿಲ್ಲ. ಬಳಿಕ ಜಮೀನಿಗೆ ತೆರಳಿ ಪರಿಶೀಲನೆ ಮಾಡಿದಾಗ ತಾಯಿಮಗನ ಮೃತದೇಹ ಕಂಡುಬಂದಿದೆ.
ಸ್ಥಳಕ್ಕೆ ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ…