
ನಾಡಬಂದೂಕಿನಲ್ಲಿ ಮಗನನ್ನು ಶೂ*ಟ್ ಮಾಡಿದ ತಂದೆ. ಮಗನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ…
ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಸುಮಾರು 2 ಗಂಟೆಯಲ್ಲಿ ನಡೆದಿದೆ….
ಗುಂಡೇಟಿನಿಂದ ಒಂದು ಕಣ್ಣು ಕಳೆದುಕೊಂಡ ಮಗ ಹರೀಶ್ (28) ಸುರೇಶ್ (49) ಬಂದೂಕಿನಿಂದ ಗುಂಡು ಹಾರಿಸಿದ ತಂದೆ.

ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಗಲಾಟೆಯಾಗಿದೆ.. ಮಗನ ಮೇಲೆ ಗುಂಡು ಹಾರಿಸಿದ ತಂದೆ. ಡಬ್ಬಲ್ ಬ್ಯಾರೆಲ್ ಬಂದೂಕಿನಿಂದ ಮಗನ ತಲೆಗೆ ಗುಂಡು ಹಾರಿಸಿದ ತಂದೆ.
ಗಂಭೀರ ಸ್ಥಿತಿಯಲ್ಲಿರುವ ಹರೀಶನಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ಕುಡಿದು ಸದಾ ಜಗಳವಾಡುತ್ತಿದ್ದ ತಂದೆ-ಮಗ. ಜಗಳ ಬಿಡಿಸಲು ಹೋಗುವವರನ್ನು ಮನೆಯ ಬಳಿ ಯಾರೂ ಬರದಂತೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ತಂದೆ-ಮಗ.

ಸದ್ಯ ಗುಂಡು ಹಾರಿಸಿದ ಆರೋಪಿ, ಬಂದೂಕನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ….
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.