ಪ್ರೀಯತಮನೊಂದಿಗೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ: ನಮ್ಮ ಪಾಲಿಗೆ ಮಗಳು ಇನ್ನಿಲ್ಲ ಎಂದು ಬ್ಯಾನರ್ ಕಟ್ಟಿ, ಊರಿಗೆ ಊಟ ಹಾಕಿಸಿದ ಅಪ್ಪ‌

ಪ್ರೀತಿಸಿದ ಹುಡುಗನೊಂದಿಗೆ ಮನೆಬಿಟ್ಟು ಓಡಿ ಹೋದ ಕೋಪಕ್ಕೆ ಮಗಳ ತಿಥಿ ಮಾಡಿದ ಅಪ್ಪ. ನಮ್ಮ ಪಾಲಿಗೆ ಮಗಳು ಇನ್ನಿಲ್ಲ ಎಂದು ಇಲ್ಲೊಬ್ಬ ನೊಂದ ತಂದೆ ಊರಿಗೆ ಊಟ ಹಾಕಿಸಿದ್ದಾನೆ.

19 ವರ್ಷದ ಹುಡುಗಿ, 29 ವರ್ಷದ ಹುಡುಗ ಪರಸ್ಪರ ಪ್ರೀತಿಸಿದ್ದರು, ಮದುವೆಯಾಗಲು ಮನೆಯಿಂದ ಪರಾರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ತಂದೆ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧ ಕತ್ತರಿಸಿಕೊಂಡಿದ್ದಾನೆ.

ಸುಶ್ಮಿತಾ ಶಿವಗೌಡ ಪಾಟೀಲ ಪ್ರೀತಿಸಿ ಓಡಿಹೋದ ಯುವತಿ. ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬ ಯುವಕನೊಂದಿಗೆ ಪರಾರಿಯಾಗಿದ್ದ ಸುಶ್ಮಿತಾ.

ವಿಠ್ಠಲ ಬಸ್ತವಾಡ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡುತ್ತಿದ್ದ. ಸುಶ್ಮಿತಾ ತಂದೆಯ ನಾಲ್ಕು ಜನ ಹೆಣ್ಣುಮಕ್ಕಳು ಪೈಕಿ ಸುಶ್ಮಿತಾ ಕೊನೆಯವಳು.

ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರೋ ತಂದೆ ಶಿವಗೌಡ ಪಾಟೀಲ. ಮೊದಲಿಗೆ ರಾಯಬಾಗ ಪೊಲೀಸ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟಿದ್ದ ಶಿವಗೌಡ. ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭರ್ಜರಿ ಭೋಜನ ಹಾಕಿಸಿದ್ದಾನೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!