
ಜೆಡಿಎಸ್ ಪಕ್ಷಕ್ಕೆ ಹಳ್ಳಿರೈತ ಅಂಬರೀಶ್ ಗುಡ್ ಬೈ ಹೇಳಿದ್ದಾರೆ. ತೂಬಗೆರೆ ಹೋಬಳಿ ಜೆಡಿಎಸ್ ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿದ್ದರು. ಇದೀಗ ವಕ್ತಾರ ಪದವಿಗೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಹಳ್ಳಿರೈತ ಅಂಬರೀಶ್, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೀರಾ. ನಮ್ಮ ವಿರೋಧಿ ಪಕ್ಷಗಳ ಸಂಸದರು, ಶಾಸಕರಿಗೆ ಹಲಸಿನ ಹಣ್ಣು ನೀಡಲು ಹೋಗಿ ಅವರ ಜೊತೆ ಗುರುತಿಸಿಕೊಳ್ಳುತ್ತಿದ್ದೀರಾ. ಪಕ್ಷಕ್ಕೆ ಮುಜುಗರ ಆಗುವಂತೆ ನಡೆದುಕೊಳ್ಳುತ್ತಿದ್ದೀರಾ ಎಂದು ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರ ಮುಂದೆ ತೂಬಗೆರೆ ಹೋಬಳಿಯ ಯುವ ಜನತಾದಳದ ಅಧ್ಯಕ್ಷರು ಆರೋಪಿಸಿದ್ದರು ಎಂದು ಹೇಳಿದರು.
ನನಗೆ ಯಾವುದೇ ಪಕ್ಷ ಮುಖ್ಯವಲ್ಲ. ನನ್ನ ಹೋರಾಟ ಎಂದೆಂದಿಗೂ ರೈತರ ಪರ ಇರುತ್ತದೆ. ರೈತರಿಗಾಗಿ ನನ್ನ ಜೀವನ ಮುಡುಪಾಗಿಡುತ್ತೇನೆ. ನನ್ನ ಏಳಿಗೆ ಸಹಿಸದ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹಾಕಿ ಪಕ್ಷ ತೊರೆಯುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.