
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ಚಿನ್ನದ ಅಂಗಡಿಯಲ್ಲಿ ಚಿನ್ನ ದೋಚಿದ್ದ ಖತರ್ನಾಕ್ ಬುರ್ಖಾ ಗ್ಯಾಂಗ್ ನ್ನು ಬಂಧನ ಮಾಡಲಾಗಿದೆ. ಬಟ್ಟೆ ಖರೀದಿಸುವ ನೆಪದಲ್ಲಿ ಚಿನ್ನದ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ಬುರ್ಕಾ ಗ್ಯಾಂಗ್. ಚಿನ್ನದ ಓಲೆ ಇದ್ದ ಬಾಕ್ಸ್ ಕದ್ದು ಎಸ್ಕೇಪ್ ಆಗಿದ್ದ ಐದು ಜನ ಮಹಿಳೆಯರ ಗ್ಯಾಂಗ್. ಚಿಂತಾಮಣಿ ನಗರದ ಸೌಂದರ್ಯ್ಯ ಫ್ಯಾಷನ್ ಅಂಡ್ ಜುವೆಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ಮಾಡಿ ಒಂದು ವರ್ಷದ ಬಳಿಕ ಮಾಲ್ ಸಮೇತ ಖಾಕಿ ಬಲೆಗೆ ಬಿದ್ದ ಬುರ್ಖಾ ಗ್ಯಾಂಗ್. ಬುರ್ಖಾ ಗ್ಯಾಂಗ್ ಚಿನ್ನದ ಬಾಕ್ಸ್ ಕದ್ದಿದ್ದ ವೀಡಿಯೋ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಪ್ಪತ್ತೆಂಟು ಗ್ರಾಂ ತೂಕದ ಏಳು ಲಕ್ಷ ಬೆಲೆ ಬಾಳುವ ಹದಿನಾರು ಜೊತೆ ಓಲೆ ಬಾಕ್ಸ್ ಕದ್ದಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಿಸಿ ಕ್ಯಾಮೇರಾ ವೀಡಿಯೋ ಆಧರಿಸಿ ಬುರ್ಕಾ ಗ್ಯಾಂಗ್ ಗೆ ಬಲೆ ಬೀಸಿದ್ದ ಖಾಕಿ ಪಡೆ. ಕೊನೆಗೂ ಐದು ಜನ ಮಹಿಳೆರಿದ್ದ ಖತರ್ನಾಕ್ ಬುರ್ಖಾ ಗ್ಯಾಂಗ್ ನ್ನು ಬಂಧನ ಮಾಡಲಾಗಿದೆ.
ಕೋಲಾರ ಮೂಲದ ನಗ್ಮಾ, ಜರೀನಾ, ನಗೀನಾ, ನವೀನಾ, ಮುಬೀನಾ ಬಂಧಿತ ಬುರ್ಖಾ ಗ್ಯಾಂಗ್.
ಕಳುವಾಗಿದ್ದ ಚಿನ್ನಾಭರಣಗಳನ್ನು ಅಂಗಡಿ ಮಾಲೀಕನಿಗೆ ಹಿಂದುರುಗಿಸಿದ ಪೊಲೀಸರು. ಆರೋಪಿಗಳಿಂದ ಎಪ್ಪತ್ತು ಗ್ರಾಂ ತೂಕದ ಸುಮಾರು ಏಳು ಲಕ್ಷ ಬೆಲೆ ಬಾಳುವ ಓಲೆ ಬಾಕ್ಸ್ ವಶಕ್ಕೆ ಪಡೆಯಲಾಗಿದೆ.