
ದೇವನಹಳ್ಳಿ: ಇಂದಿನ ಮಕ್ಕಳು ಗಾಂಧೀ,ಬುದ್ದ ಬಸವಣ್ಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಿದ್ದಂತಹ ಸಾಮಾಜಿಕ ಕಳಕಳಿ ,ಹೋರಾಟ ಮತ್ತು ಉತ್ತಮ ನಾಯಕತ್ವ ರೂಪಿಸಿಕೊಳ್ಳಬೇಕು ,ಶಿಕ್ಷಣವೆಂಬುದು ಹೆಚ್ಚು ಅಂಕಗಳು ಮತ್ತು ಕೆಲಸ ಪಡೆಯಲು ಮಾತ್ರ ಸೀಮಿತವಾಗದೇ ಒಳ್ಳೆಯ ಸಂಸ್ಕಾರ ,ಗುರು ಹಿರಿಯರನ್ನು ಗೌರವಿಸುವ ಗುಣ ,ಧರ್ಮ ಜಾತಿಗಳ ಕಟ್ಟುಪಾಡುಗಳಿಗೆ ಒಳಪಡದೇ ವಿಶಾಲ ಮನೋಭಾವದ ಯೋಚನೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಾಣಕ್ಯ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ” ದೇವನಹಳ್ಳಿ ತಾಲೂಕಿನ ಎಸೆಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಆಯ್ದಾ ಐದು ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭ”ವನ್ನು ಉದ್ಘಾಟಿಸಿ ಮಾತನಾಡಿದರು.
ಚಾಣಕ್ಯದಂತಹ ಮಹಾನ್ ಸಾಮಾಜಿಕ ಗುರುಗಳ ಹಾದಿಯಲ್ಲಿ ಸಮಾಜವನ್ನು ಸುಧಾರಣೆಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿರುವ ಚಾಣಕ್ಯ ವಿಶ್ವವಿದ್ಯಾಲಯದ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದರು,ಭಾರತ ದೇಶದ ಕಲ್ಯಾಣಕ್ಕೆ ಸತ್ಪ್ರಜೆಗಳ ಸೃಷ್ಟಿಸುವ ಇಂತಹ ಶಾಲೆಗಳ ಸಮಾಜಕ್ಕೆ ಅಗತ್ಯವಿದೆ ಎಂದರು.
ಚಾಣಕ್ಯ ವಿಶ್ವವಿದ್ಯಾಲಯ ಸಂಸ್ಥಾಪಕ ಕುಲಪತಿಗಳು ಎಂ.ಕೆ.ಶ್ರೀಧರ್ ಮಾತನಾಡಿ ಕಾರ್ಯಕ್ರಮದಲ್ಲಿ ನೆರೆದಿರುವ ಪ್ರತಿಯೊಬ್ಬರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿ,ನಮ್ಮ ವಿದ್ಯಾರ್ಥಿಗಳಲ್ಲಿ ಸಮಗ್ರ ನಾಯಕತ್ವ ಕಲಿಸುವುದು ನಮ್ಮ ಸಂಸ್ಥೆಯ ಉದ್ದೇಶ ಹಾಗೂ ವಿಶ್ವವಿದ್ಯಾಲಯಕ್ಕೆ ಸಹಕರಿಸುತ್ತಿರುವ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕೃತಜ್ಞತೆ ಹೇಳಿದರು.
ಸರ್ಕಾರಿ ಶಾಲೆಗಳು ಎಷ್ಟೇ ಟೀಕೆಗಳು ಮಾಡಿದರೂ ನಿಜವಾದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳುವವರು ಅವರೇ ಅಂತಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಯೋಚನೆಯೊಂದಿಗೆ ಯುವಕಾ ಸಂಘ,ಕ್ಯಾಂಪಸ್2ಕಮ್ಯುನಿಟಿ ಮತ್ತು ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಉಚಿತ ಕಂಪೂಟರ್ ನೀಡುತ್ತಿದ್ದೇವೆ.ಮುಂದಿನ ದಿನಗಳಲ್ಲಿ ಇಲ್ಲಿ ಸುತ್ತಲೂ ಅನೇಕ ಕಂಪನಿಗಳು ನಿರ್ಮಾಣವಾಗಲಿದೆ ಅದಕ್ಕೆ ಪೂರಕವಾದ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕು ಅದಕ್ಕಾಗಿ ನಮ್ಮ ಸಂಸ್ಥೆ ಶ್ರಮಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲೂಕಿನ ಪ್ರತಿಭಾವಂತ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಆಯ್ದ ಐದು ಶಾಲೆಗಳಿಗೆ ಉಚಿತ ಕಂಪ್ಯೂಟರ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಬಯಪ್ಪ ಅಧ್ಯಕ್ಷರಾದ ವಿ.ಶಾಂತಕುಮಾರ್,ತಹಸೀಲ್ದಾರ್ ಅನಿಲ್ ಕುಮಾರ್ ,ಇಒ.ಶ್ರೀನಾಥ್ ಗೌಡ,ಉಪ ಕುಲಪತಿಗಳು ಎಚ್.ಎಸ್.ಸುಬ್ರಮಣ್ಯ,ಕ್ಷೇತ್ರದ ಶಿಕ್ಷಣಧಿಕಾರಿ ಲಲೀತಮ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್ ,ಮೈಕ್ರೋ ಸಾಫ್ಟ್ ಪದಾಧಿಕಾರಿಗಳು ಕಿಶೋರ್ ಕುಮಾರ್,ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್,ತಾಪಂ ಮಾಜಿ ಸದಸ್ಯರಾದ ಸೋಮತ್ತನಹಳ್ಳಿ ಮಂಜುನಾಥ್,ಮುನೇಗೌಡ,
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ,ಬಯಪ್ಪ ನಿರ್ದೇಶಕ ಪ್ರಸನ್ನ ಕುಮಾರ್,ಗಂಗವಾರ ಬೈರೇಗೌಡ, ಮುಖಂಡರುಗಳಾದ ಲಕ್ಷ್ಮಣ್ ಮೂರ್ತಿ, ಚನ್ನಹಳ್ಳಿ ಗ್ರಾ.ಪಂ ಅಧ್ಯಕ್ಷ ದೇವರಾಜ್, ಮಾಜಿ ಅಧ್ಯಕ್ಷ ರಾಧಾಕೃಷ್ಣ,ವೆಂಕಟೇಶ್ ,ಮಂಜುಳಾ,ಯುವಕ ಸಂಘ ನಿರ್ದೇಶಕ ಮಹೇಶ್, ಸಂಯೋಜಕರಾದವದರ್ಶನ್, ಅಮೋಘ್,ಅಕಾಶ್,ದಿವಾಕರ್,ಅನುಷಾ ಸೇರಿದಂತೆ ಹಲವು ಮುಖಂಡರು ಚಾಣಕ್ಯ ವಿಶ್ವವಿದ್ಯಾನಿಲಯ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು , ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾದ್ದರು.