ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ‌ ವಿಧಿವಶ

ಖ್ಯಾತ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಬುಧವಾರ ನಿಧನರಾದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.ಮೈ ಸೂರಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, ನಿವೃತ್ತಿ ಜೀವನನ್ನು ನಡೆಸುತ್ತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ರಾಷ್ಟ್ರೋತ್ತಾನ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ. ಹೃದಯಾಘಾತದಿಂದಾಗಿ ಮಧ್ಯಾಹ್ನ 2.38ಕ್ಕೆ ನಿಧನರಾದರು ಎಂದು ಆಸ್ಪತ್ರೆಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ವಂಶವೃಕ್ಷ, ದಾಟು, ತಂತು, ಪರ್ವ, ಗೃಹಭಂಗ, ಸಾರ್ಥ, ಮಂದ್ರ ಸೇರಿದಂತೆ ಹಲವಾರ ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದವು. ಹಿಂದಿ, ಮರಾಠಿ, ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಿಗೆ ಭೈರಪ್ಪ ಅವರ ಕಾದಂಬರಿಗಳು ಅನುವಾದಗೊಂಡಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,  ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಪದ್ಮಶ್ರೀ ಹಾಗೂ ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಪ್ರಮುಖ ಪುಸ್ತಕಗಳು

ಗಾಥಾ ಜನ್ಮ ಮಾತೆರಡು ಕಥೆಗಳು (1955)

ಭೀಮಕಾಯ (1958)

ಧರ್ಮಶ್ರೀ (1961)

ದೂರ ಸರಿದರು (1962)

ಮಾತಾಡನಾ (1965)

ವಂಶವೃಕ್ಷ (1965)

ಜಲಪಾತ (1967)

ನಾಯಿ ನೇರಲು (1968)

ತಬ್ಬಲಿಯು ನೀನಾದೆ ಮಗನೆ (1968)

ಗೃಹಭಂಗ (1970)

ನಿರಾಕರಣ (1971)

ಗ್ರಹಾನಾ (1972)

ದಾತು (1972)

ಅನ್ವೇಷಣೆ (1976)

ಪರ್ವ (1979)

ನೆಲೆ (1983)

ಸಾಕ್ಷಿ (1986)

ಅಂಚು (1990)

ತಂತು (1993)

ಸಾರ್ಥ (1998)

ಮಂದ್ರ (2001)

ಆವರಣ (2007)

ಕವಲು (2010)

Yaana (2014)

ಉತ್ತರಕಾಂಡ (2017)

Leave a Reply

Your email address will not be published. Required fields are marked *

error: Content is protected !!