
ಶಾರ್ಟ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಡಿಕ್ರಾಸ್ ಬಳಿ ಕಳೆದ ರಾತ್ರಿ ಸುಮಾರು 10:30ರಲ್ಲಿ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿದ್ದ ಸುಮಾರು 60ಲಕ್ಷ ಮೌಲ್ಯದ ಹೊಸ ಮೊಬೈಲ್ ಫೋನ್ಸ್, ಕಂಪ್ಯೂಟರ್, ಸರ್ವೀಸ್ ಆಕ್ಸೆಸರಿಸ್, ಪ್ರಿಂಟರ್, ನಗದು ಸೇರಿದಂತೆ ಇತರೆ ವಸ್ತುಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಅಂಗಡಿ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…