ಡೇರಿಯಲ್ಲಿ ರಾಜಕೀಯ ಬೇಡ: ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್,

ಕೋಲಾರ: ಜಿಲ್ಲೆಯ ರೈತರ ಜೀವನಾಧಾರ ಹೈನುಗಾರಿಕೆಯಾಗಿದ್ದು ಈ ಸಂಸ್ಥೆಯನ್ನು ಉಳಿಸಿ ಬೆಳೆಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯ ಮಾಡದೆ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ತಿಳಿಸಿದರು.

ತಾಲೂಕಿನ ತುರಾಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಜನತೆ ಹೈನುಗಾರಿಕೆಯಿಂದ ಆದಾಯ ಗಳಿಸುವ ಮೂಲವಾಗಿದೆ ಉತ್ಪಾದಕರ ಮತ್ತು ಡೇರಿ ಅಭಿವೃದ್ಧಿಗಾಗಿ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಮುಂದೆ ಒಕ್ಕೂಟದಲ್ಲಿ 10 ಲಕ್ಷ ಲೀಟರ್ ಹಾಲಿನ ಗುರಿ ಹೊಂದಿದ್ದು ಹಸು ಸಾಕಾಣಿಕೆ ಹೆಚ್ಚಾಗಬೇಕು ಇದಕ್ಕೆ ಪೂರಕವಾಗಿ ಒಕ್ಕೂಟದ ಜೊತೆಗೆ ಸಂಘದಿಂದ ಸಹಾಯ ನೀಡಲಾಗುತ್ತದೆ ಎಂದರು.

ಸಂಘದಲ್ಲಿ ಪ್ರತಿ ವರ್ಷ ಲಾಭಾಂಶ ಪಡೆಯುತ್ತಿದ್ದರೂ ಸಂಘಕ್ಕೆ ಸ್ವಂತ ಕಟ್ಟಡವಿಲ್ಲ ಬಾಡಿಗೆಯಲ್ಲಿ ನಡೆಯುತ್ತಿದೆ ಈಗಾಗಲೇ ಸಂಘಕ್ಕೆ ಜಾಗಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಜಾಗ ಮಂಜೂರು ಮಾಡಿಸಲಾಗುತ್ತದೆ ಜೊತೆಗೆ ಹೊಸ ಕಟ್ಟಡ ಕಟ್ಟಲು ಸಹ ಒಕ್ಕೂಟ ಮತ್ತು ಕೆಎಂಎಫ್ ವತಿಯಿಂದ 10 ಲಕ್ಷ ಅನುದಾನವನ್ನು ನೀಡಲಾಗುತ್ತದೆ ಜೊತೆಗೆ 1 ಲಕ್ಷ ಧರ್ಮಸ್ಥಳ ಸಂಘವು ನೀಡುತ್ತದೆ ಉಳಿದ ಹಣವನ್ನು ಕೊಡಿಸುವ ಕೆಲಸವನ್ನು ಮಾಡತ್ತೇನೆ ಎಂದು ಭರವಸೆ ನೀಡಿದರು ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು ಯಶಸ್ವಿನಿ ಕಾರ್ಡ್ ಮಾಡಿಸಿಕೊಂಡು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಹಾಲು ಉತ್ಪಾದಕರು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡೇರಿ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ಈ ವರ್ಷವು 5.38 ಲಕ್ಷ ಲಾಭಾಂಶ ಬಂದಿದೆ ಕಳೆದ ವರ್ಷಕ್ಕಿಂತ ಈ ವರ್ಷ 1.53 ಲಕ್ಷ ಹೆಚ್ಚುವರಿ ಲಾಭಗಳಿದೆ ಇದಕ್ಕೆ ನಿರ್ದೇಶಕರು ಮತ್ತು ಹಾಲು ಉತ್ಪಾದಕರು ಮುತುವರ್ಜಿಯಿಂದ ಸಾಧ್ಯವಾಗಿದೆ ಜಾಗದ ಸಮಸ್ಯೆ ಇದ್ದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು ಆದಷ್ಟು ಬೇಗ ಜಾಗ ಮಂಜೂರು ಮಾಡಲಿದ್ದು ಅ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ಕ್ರಮ ವಹಿಸಲಾಗಿತ್ತು ಉತ್ಪಾದಕರ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ಲಾಭ ಗಳಿಸುವಂತೆ ತಿಳಿಸಿದರು.

ಈ ಕೋಮುಲ್ ವಿಸ್ತರಣಾಧಿಕಾರಿ ನಾಗೇಂದ್ರ, ಡೇರಿ ನಿರ್ದೇಶಕರಾದ ಟಿ.ಸಿ ಶ್ರೀನಿವಾಸ್, ಟಿ.ಕೆ ವೆಂಕಟೇಶ್, ಟಿ.ಕೆ ಮಂಜುನಾಥ್, ಮುನಿಶಾಮಪ್ಪ, ಟಿ.ಎನ್ ವೆಂಕಟೇಶ್, ಟಿ.ವಿ ನಾಗರಾಜ್, ವೆಂಕಟಪ್ಪ, ಅಮರಾವತಮ್ಮ, ಉಮಾ, ಕಾರ್ಯದರ್ಶಿ ಆನಂದ್, ಹಾಲು ಪರೀಕ್ಷಕ ವೆಂಕಟೇಶ್, ಸಹಾಯಕ ನಾರಾಯಣಸ್ವಾಮಿ ಸೇರಿದಂತೆ ಹಾಲು ಉತ್ಪಾದಕರು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *

error: Content is protected !!