
ಗುಡಿಬಂಡೆ: ಗಂಡ ಹೆಂಡತಿಯ ಜಗಳದಲ್ಲಿ ಪತ್ನಿಯ ಭೀಕರ ಕೊಲೆಯಾದ ಘಟನೆ ಪಟ್ಟಣದ ಎಂಟನೇ ವಾರ್ಡ್ ನಲ್ಲಿ ನಡೆದಿದೆ.
ರಾಮಿಜಾಬಿ (25) ಕೊಲೆಯಾದ ಮಹಿಳೆ, ಈಕೆ ಪಟ್ಟಣದಲ್ಲಿ ಸುಮಾರು 3 ವರ್ಷಗಳಿಂದ, ಎರಡನೇ ಗಂಡನಾದ ಬಾಬಾ ಜಾನ್ ರೊಂದಿಗೆ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ಸುಮಾರು 4 ಗಂಟೆ ಸಮಯದಲ್ಲಿ ಗಂಡ ಹೆಂಡತಿ ಕ್ಷುಲಕ ಕಾರಣಕ್ಕೆ ಜಗಳವಾಗಿದ್ದು, ಇಬ್ಬರ ಜಗಳದಲ್ಲಿ ಪತ್ನಿಯನ್ನು ಗಂಡ ಭೀಕರವಾಗಿ ಕೊಲೆ ಮಾಡಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಬಾಬಾಜಾನ್ ರನ್ನು ಬಂಧಿಸಿದ್ದಾರೆ.

ಮೃತ ದುರ್ದೈವಿ ರಮಿಜಾಬಿ ಮೂಲತಃ ಶ್ರೀನಿವಾಸಪುರ ಗ್ರಾಮದವಳಾಗಿದ್ದು, ಮೊದಲು ಮುಳಬಾಗಿಲು ತಾಲೂಕಿನ ಅಲ್ಲಾಬಕಾಶ್ ರೊಂದಿಗೆ ಮದುವೆಯಾಗಿದ್ದು, ನಂತರ ಆತನನ್ನು ಬಿಟ್ಟು ಬಾಬಾಜಾನ್ ರೊಂದಿಗೆ ಎರಡನೇ ಮದುವೆಯಾಗಿ ಗುಡಿಬಂಡೆ ಪಟ್ಟಣದಲ್ಲಿ ವಾಸವಾಗಿದ್ದು, ಆಗಾಗ್ಗೆ ಇಬ್ಬರ ನಡುವೆ ಗಲಾಟೆಗಳು ಆಗುತ್ತಿದ್ದು, ಗಂಡ ಹೆಂಡತಿ ಗಲಾಟೆ ಕೊನೆಯಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದ್ದು, ಸದ್ಯ ಗಂಡ ಪೊಲೀಸರ ಅತಿಥಿಯಾಗಿದ್ದಾನೆ,