ಸೆಪ್ಟಂಬರ್ 7 ರಂದು ಭಾನುವಾರ ಮಧ್ಯರಾತ್ರಿ ಚಂದ್ರಗ್ರಹಣ ಕಂಡುಬಂದಿದ್ದು, ಈ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನ ಭಾನುವಾರ ಸಂಜೆ 4:30 ಗಂಟೆಗೆ ಬಂದ್ ಮಾಡಲಾಗಿತ್ತು.
ಪ್ರತಿ ದಿನವೂ ರಾತ್ರಿ 8:30ಕ್ಕೆ ಕ್ಲೋಸ್ ಮಾಡಲಾಗುತ್ತಿದ್ದ ದೇವಾಲಯದ ಬಾಗಿಲನ್ನ ಗ್ರಹಣದ ಅಂಗವಾಗಿ ಸಂಜೆ 4:30ಕ್ಕೆ ಮುಚ್ಚಲಾಗಿತ್ತು. ಇನ್ನೂ ಗ್ರಹಣದ ನಂತರ ಎಂದಿನಂತೆ ಇಂದು ಬೆಳಿಗ್ಗೆ ಶುದ್ಧೀಕರಣ ಮಾಡಿದ ಬಳಿಕ ದೇವಾಲಯದ ಬಾಗಿಲು ತೆರೆದು. ಭಕ್ತಾಧಿಗಳು ದೇವರ ದರ್ಶನ ಪಡೆಯಲು ಅನುವು ಮಾಡಿಕೊಡಲಾಯಿತು.
ಸದ್ಯ ಚಂದ್ರಗ್ರಹಣ ಮುಕ್ತಾಯವಾಗಿದ್ದು, ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಶುದ್ದೀಕರಣ ಮಾಡಿ, ಬಾಗಿಲು ತೆರೆದು, ದೇವರಿಗೆ ಎಂದಿನಂತೆ ಪ್ರಾತಃ ಕಾಲದ ಪೂಜೆ ಆರಂಭ ಮಾಡಲಾಗಿದೆ.
ದೇವಾಲಯದ ಅರ್ಚಕರಿಂದ ವಿಗ್ರಹಗಳನ್ನು ಶುದ್ದಿಕರಿಸಿ ಪ್ರಥಮ ಪೂಜೆ ಸಲ್ಲಿಕೆ ಮಾಡಲಾಯಿತು. ಇಂದು ಬೆಳಗ್ಗೆ 8 ಗಂಟೆ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.