
ಆ.29ರಂದು ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ ನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟಗೊಂಡು ತನುಷ್ ರಾವ್(15) ಹಾಗೂ ಯೋಗೇಶ್(15) ಎಂಬ ಇಬ್ಬರು ಬಾಲಕರು ಮೃತರಾಗಿದ್ದಾರೆ. ಈ ಹಿನ್ನೆಲೆ ಘಟನೆಯಲ್ಲಿ ಮೃತಪಟ್ಟ ಇಬ್ಬರು ಬಾಲಕರಿಗೆ ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶ್ರದ್ಧಾಂಜಲಿ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಮುತ್ತೂರಿನ ದುರಂತ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಂಡು ಮೃತ ಬಾಲಕರಿಗೆ ಸಂತಾಪ ಸೂಚಿಸಿದರು.
ಈ ವೇಳೆ ಇಮ್ರಾನ್, ನಿಸಾರ್, ಮೆಹಬೂಬ್ ಪಾಷಾ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು…
ಘಟನೆ ವಿವರ….
ಆ.29ರ ಶುಕ್ರವಾರ ಸಂಜೆ 5:45 ಗಂಟೆಯಲ್ಲಿ ಫ್ರೆಂಡ್ಸ್ ವಿನಾಯಕ ಗ್ರೂಪ್‌ವತಿಯಿಂದ ಗಣೇಶ ಮೆರವಣಿಗೆ ಹಾಗೂ ವಿಸರ್ಜನೆಗೆಂದು ಪವರ್ ಲಿಫ್ಟರ್ ವಾಹನವನ್ನು ಕರೆಸಲಾಗಿತ್ತು. ಮೆರವಣಿಗೆ ವೇಳೆ ಪಟಾಕಿಗಳನ್ನು ಪವರ್ ಲಿಫ್ಟರ್ ವಾಹನದ ಇಂಜಿನ್ ಮೇಲೆ ಇಡಲಾಗಿತ್ತು. ಚಿಕ್ಕ ಕ್ರೇನ್ ನ ಇಂಜಿನ್ ಬಿಸಿಯಾಗಿ, ಅದರ ಮೇಲೆ ಇಡಲಾಗಿದ್ದ ಪಟಾಕಿಗಳ ಏಕಾಏಕಿ ಸ್ಫೋಟಗೊಂಡಿದ್ದವು.
ಘಟನೆ ನಡೆದ ದಿನದಂದೇ (ಆ.29ರಂದು) ತನುಷ್ ರಾವ್(15), ಸಾವನ್ನಪ್ಪಿದ್ದನು. ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದ ಯೋಗೇಶ್(15) ಸೆ.3ರಂದು ಮೃತಪಟ್ಟಿದ್ದನು. ಈ ಹಿನ್ನೆಲೆ ಮೃತ ಬಾಲಕರಿಗೆ ಮುಸ್ಲಿಂ ಸಮುದಾಯದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ….
ಗಣೇಶ್(16), ಮುನಿರಾಜು(27), ಪವರ್ ಲಿಫ್ಟ್ ಚಾಲಕ ನಾಗರಾಜು(35), ಚೇತನ್ ಶಾವಿ(13), ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಸೇರಿದಂತೆ ಇತರರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ…