
ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದಕ್ಕೆ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಪಾಪಿ ಪತಿರಾಯ. ಗಂಡನ ಕಿರುಕುಳ ತಾಳಲಾರದೇ ಗೃಹಿಣಿ ನೇಣಿಗೆ ಶರಣಾಗಿದ್ದಾಳೆ.
ಪೂಜಶ್ರಿ (28) ಗಂಡನ ಕಿರುಕುಳ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೃಹಿಣಿ.
ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಘಟನೆ ನಡೆದಿದೆ…
ನಂದೀಶ್ ಹಾಗೂ ಪೂಜಶ್ರೀ ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ಮದುವೆಯಾಗಿದ್ದರು. ನಂದೀಶ್ ಹಾಗೂ ಪೂಜಶ್ರೀ ದಂಪತಿಗೆ ಒಂದು ಹೆಣ್ಣು ಮಗೂ ಕೂಡ ಇದೆ.
ನಂದೀಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಪೂಜಶ್ರೀ ಕೂಡಾ ಖಾಸಗಿ ಬ್ಯಾಂಕ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಮದುವೆಯಾಗಿ ಒಂದು ವರ್ಷದ ನಂತರ ನಂದೀಶ್ ಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಇದೇ ವಿಚಾರಕ್ಕೆ ಪೂಜಶ್ರೀ ಪ್ರಶ್ನೆ ಮಾಡಿದ್ದರು. ಗಂಡನ ಅನೈತಿಕ ಸಂಬಂಧ ಪ್ರಶ್ನೆ ಮಾಡಿದಕ್ಕೆ ದಿನನಿತ್ಯ ನಂದೀಶ್ ಕಿರುಕುಳ ನೀಡುತ್ತದನು. ಜೊತೆಗೆ ವರದಕ್ಷಿಣೆ ಕಿರುಕುಳ ಕೂಡ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಎರಡು ಮೂರು ಬಾರಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕಿರುಕುಳ ನೀಡೋದಿಲ್ಲ ಅಂತ ಹೇಳಿ ಪೂಜಶ್ರಿ ಯನ್ನ ನಂದೀಶ್ ಮನೆಗೆ ಕರೆದೊಯ್ದಿದ್ದ. ಇದಾದ ಬಳಿಕ ಮೂರು ದಿನಗಳ ಹಿಂದೆ ಇದೇ ರೀತಿ ಜಗಳ ಮಾಡಿದ್ದ. ಹಲ್ಲೆ ಮಾಡಿದ್ದ ಹಿನ್ನೆಲೆ ಪೂಜಶ್ರೀ ತನ್ನ ತಾಯಿ ಮನೆಗೆ ಬಂದಿದ್ದಳು. ಮರು ದಿನ ಬೆಳಿಗ್ಗೆ ನಂದೀಶ್ ಹೆಂಡತಿ ಮನೆಗೆ ಹೋಗಿ ಪೂಜಶ್ರೀಯನ್ನು ಕಥೆ ಕಟ್ಟಿ ಕರೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಪೂಜಶ್ರೀ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ ವಿಕ್ಟೋರಿಯಾ ಆಸ್ಪತ್ರಗೆ ರವಾನೆ ಮಾಡಲಾಗಿದೆ.