ಕನ್ನಡದ ಖ್ಯಾತ ಹಾಸ್ಯನಟ ಚಿಕ್ಕಣ್ಣ ಸದ್ದಿಲ್ಲದೇ ಹಸಮಣೆ ಏರಲು ಸಜ್ಜಾಗಿದ್ದಾರೆ. ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ. ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ.
ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಚಿಕ್ಕಣ್ಣನ ಮನಸ್ಸು ಕದ್ದ ಪಾವನಾ ಯಾರು ಗೊತ್ತಾ? ಮಂಡ್ಯ ಮೂಲದ ಪಾವನಾ ಕೆ.ಸಿ ಗೌಡ ಎನ್ನುವವರ ಜೊತೆ ನಟ ಚಿಕ್ಕಣ್ಣ ಹಸೆಮಣೆ ಏರಲಿದ್ದಾರೆ. ಪಾವನಾ ಅವರು ಮೈಸೂರಿನಲ್ಲಿ ಪಿಯುಸಿ ಸೇರಿದಂತೆ ಉನ್ನತ ಶಿಕ್ಷಣ ಪೂರೈಸಿದ್ದಾರೆ. Greenaura Techno Ventures ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿರುವ ಪಾವನಾ ಅವರು ಉದ್ಯಮಿ ಕೂಡ ಹೌದು ಎಂದು ತಿಳಿದು ಬಂದಿದೆ. ಅಂದಹಾಗೆ ಪಾವನಾ ಅವರು ಮೆಕ್ಯಾನಿಕಲ್ ಇಂಜಿನಿಯರ್ ಎನ್ನಲಾಗಿದೆ.