ಆಗಸ್ಟ್ 30 ರಿಂದ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ

ಕಾಸರಗೋಡು ದ.ಕ ಉಡುಪಿ ಉ.ಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ದ.ಕ ಕಾಸರಗೋಡು ಜಿಲ್ಲೆಗಳಾದ್ಯಂತ ಬೆಳಿಗ್ಗೆಯಿಂದ ನಿರಂತರ ಮಳೆಯಾಗುತ್ತಿದ್ದು ಕರಾವಳಿ ತೀರದ ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಅಧಿಕ ವಿರಬಹುದು ಉಡುಪಿ ಉ.ಕ. ದಲ್ಲಿಯೂ ಸಾಧಾರಣ ಮಳೆ ಮುಂದುವರೆಯಬಹುದು ಆದರೇ ಉ.ಕ.ನಿನ್ನೆಗಿಂತ ಮಳೆ ಸ್ವಲ್ಪ ಕಡಿಮೆಯಾಗಬಹುದು. ಕರಾವಳಿ ಜಿಲ್ಲೆಗಳಲ್ಲಿ ನಾಳೆಯೂ ಸಾಧಾರಣ ಮಳೆಯ ಮುನ್ಸೂಚನೆ ಇದೆ. 30 ರಿಂದ ಸೆಪ್ಟೆಂಬರ್ 5 ತನಕ ಸಾಮಾನ್ಯ ಮಳೆ ಮುಂದುವರೆಯಬಹುದು.

ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಕರಾವಳಿಗೆ ಹೊಂದಿಕೊಂಡಿರುವ ಘಟ್ಟಪ್ರದೇಶಗಳಲ್ಲಿ ಅಧಿಕ ಮಳೆಯಾಗಬಹುದು. ಆಗಸ್ಟ್ 30 ರಿಂದ ಮಳೆ ಪ್ರಮಾಣ ಕಡಿಮೆ ಆಗಿ ಸಾಮಾನ್ಯ ಮಳೆ ಮುಂದುವರೆಯಬಹುದು.

ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಎಲ್ಲಾ ಜಿಲ್ಲೆಗಳ ಅಲ್ಲಲ್ಲಿ ತುಂತುರು – ಸಾಮಾನ್ಯ ಮಳೆ ಮುನ್ಸೂಚನೆ ಇದೆ.ಆಗಸ್ಟ್ 30 ರಿಂದ ಮೋಡ ಕಡಿಮೆ ಆಗಿ ಬಿಸಿಲು ಬರಬಹುದು. ಉತ್ತರ ಒಳನಾಡಿನ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು ವಿಜಾಪುರ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಬೆಳಗಾವಿ ಧಾರವಾಡ ಗದಗ ಬಾಗಲಕೋಟೆ ಹಾವೇರಿ ಕೊಪ್ಪಳ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ನಾಳೆಯಿಂದ ಮಳೆ ಕಡಿಮೆಯಾಗಲು ಪ್ರಾರಂಭವಾಗಲಿದೆ.

ಬಂಗಾಳ ಕೊಲ್ಲಿಯ ಲೋ ಪ್ರೆಷರ್ ಒರಿಸ್ಸಾ ಮೂಲಕ ಭೂ ಭಾಗ ಪ್ರವೇಶಿಸಿದ್ದು ಇದರ ಪ್ರಭಾವದ ಗಾಳಿಯು ಛತ್ತಿಸ್ಗಡ ಮಧ್ಯಪ್ರದೇಶ ಮೂಲಕ ಗುಜರಾತ್ ರಾಜಸ್ಥಾನ ತನಕ ಮುಂದುವರೆಯಲಿದೆ. ದಕ್ಷಿಣ ಭಾರತದಲ್ಲಿ 30ರಿಂದ ಮಳೆ ಕಡಿಮೆ ಆಗಬಹುದು.

Leave a Reply

Your email address will not be published. Required fields are marked *

error: Content is protected !!