ಇಂದು ನಾಡಿನೆಲ್ಲೆಡೆ ಗೌರಿಗಣೇಶ ಹಬ್ಬವನ್ನು ಭಕ್ತಿಯಿಂದ ಸಡಗರ, ವಿಜೃಂಭಣೆ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಮನೆಗಳಲ್ಲಿ, ಬೀದಿ ಬೀದಿಗಳಲ್ಲೂ ವಿಘ್ನ ನಿವಾರಕ, ವಿಘ್ನವಿನಾಶಕ, ಮೂಷಿಕ ವಾಹನ, ಮೋದಕ ಪ್ರಿಯ, ವಿನಾಯಕ, ಗಣೇಶನ ವಿವಿಧ ರೂಪ, ಭಂಗಿಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಎಲ್ಲೆಡೆ ಗಣಪತಿಯ ಆರಾಧನೆ ಶ್ರದ್ಧೆ, ಭಕ್ತಿಯಿಂದ ನಡೆಯುತ್ತಿದೆ.
ದೊಡ್ಡಬಳ್ಳಾಪುರ ನಗರದ ಬೆಸ್ತರಪೇಟೆಯಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡ ಸ್ವಾಮಿ ವಿವೇಕಾನಂದ ಘಟಕದ ವತಿಯಿಂದ 12ಅಡಿ ಎತ್ತರದ ಹಿಂದೂ ಮಹಾಗಣಪತಿ(ಇಮ್ಮಡಿ ಪುಲಿಕೇಶಿ) ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿದೆ…
ಚಾಲುಕ್ಯ ವಂಶದ ಪ್ರಸಿದ್ಧ ರಾಜ ಇಮ್ಮಡಿ ಪುಲಿಕೇಶಿ ಲುಕ್ನಲ್ಲಿ ಗಣೇಶ ವಿಗ್ರಹ ಎಲ್ಲರ ಕಣ್ಮನ ಸೆಳೆಯುತ್ತಿದೆ.
ಪ್ರತಿ ವರ್ಷವೂ ಪುರಾತನ ಕಾಲದಿಂದಲೂ ನಾಡಿನ ಅಭಿವೃದ್ಧಿಗಾಗಿ, ಏಳಿಗೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ದುಡಿದ ಮಹಾನ್ ಸಾಧಕರ ಕುರಿತು ಇಂದಿನ ಪೀಳಿಗೆಗೆ ತಿಳಿಸಿಕೊಡುವ ಉದ್ದೇಶದಿಂದ ಅವರನ್ನು ಹೋಲುವ (ಶೈಲಿ) ಗಣೇಶ ಮೂರ್ತಿಗಳನ್ನು ತಯಾರಿಸಿ ಗಣೇಶ ಹಬ್ಬದಂದು ಪ್ರತಿಷ್ಟಾಪಿಸಿ ಪೂಜಿಸಲಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ವ ಬಜರಂಗದಳ ನಗರ ಕಾರ್ಯದರ್ಶಿ ಉಮೇಶ್ ತಿಳಿಸಿದರು.
ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಇತಿಹಾಸ…
ಇಮ್ಮಡಿ ಪುಲಿಕೇಶಿಯು (ಕ್ರಿ.ಶ. 610-642) ಚಾಲುಕ್ಯ ವಂಶದ ಪ್ರಸಿದ್ಧ ದೊರೆ. ಅವನು ದಖನ್ ಪ್ರಸ್ಥಭೂಮಿಯಲ್ಲಿ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿದನು ಮತ್ತು ಹರ್ಷವರ್ಧನನನ್ನು ಸೋಲಿಸಿ ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಪಡೆದನು. ಅವನ ಆಡಳಿತದಲ್ಲಿ ಚಾಲುಕ್ಯ ಸಾಮ್ರಾಜ್ಯವು ಉಚ್ಛ್ರಾಯ ಸ್ಥಿತಿಯನ್ನು ತಲುಪಿತು.
ಚಿಕ್ಕಂದಿನಿಂದಲೂ ಹೋರಾಟದ ಜೀವನ ನಡೆಸಿದ ಪುಲಿಕೇಶಿ ತನ್ನ ರಾಜ್ಯವನ್ನು ವಿಸ್ತರಿಸಿದ. ಉತ್ತರ ಭಾರತವನ್ನು ವಶಪಡಿಸಿಕೊಳ್ಳು ಇಂಗಿತ ಇತ್ತು. ಆದರೆ ಹರ್ಷವರ್ಧನನೇ ಯುದ್ಧ ಸಾರಿದಾಗ ಪುಲಿಕೇಶಿ ಎದುರು ಸೋತು ಸಂಧಿ ಮಾಡಿಕೊಂಡಿದ್ದ.