
ಬೆಂಗಳೂರು: ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ಕ್ರೈಂ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ಪ್ರತಿಭೆ ಶಿವಕುಮಾರ್ ಅವರಿಗೆ ದಿ ನ್ಯೂ ಇಂಡಿಯನ್ ಟೈಮ್ಸ್‌ನ (TNIT) ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ – 2025 ಲಭಿಸಿದೆ.
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿನಿಧಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಬೆಸ್ಟ್ ಕ್ರೈಂ ರಿಪೋರ್ಟ ಕನ್ನಡ ವಿಭಾಗದಲ್ಲಿ ಶಿವಕುಮಾರ್ ಅವರಿಗೆ ಸೌತ್ ಇಂಡಿಯನ್ ಮೀಡಿಯಾ ಅವಾರ್ಡ್ 2025 ಅನ್ನು ಖ್ಯಾತ ಸಿನಿಮಾ ನಟ ರವಿಕಾಳೆ ಪ್ರದಾನ ಮಾಡಿದ್ದಾರೆ.

ದೊಡ್ಡಬಳ್ಳಾಪುರದ ವಿದ್ಯಾನಗರ ನಿವಾಸಿಯಾದ ಶಿವಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕಳೆದ ಹತ್ತು ವರ್ಷಗಳಿಂದ ಕ್ರೈಂ ರಿಪೋರ್ಟಿಂಗ್ ಮಾಡುತ್ತಿದ್ದಾರೆ.
ಪ್ರಸ್ತುತ ಖಾಸಗಿ ಸುದ್ದಿವಾಹಿನಿ ನ್ಯೂಸ್ ಫಸ್ಟ್ ಕನ್ನಡ ಚಾನಲ್ ನಲ್ಲಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು, ಇದಕ್ಕೂ ಮುಂಚೆ ದಿಗ್ವಿಜಯ ನ್ಯೂಸ್ & ರಾಜ್ ನ್ಯೂಸ್ 3 ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.