7 ವರ್ಷದ ಮಗುವಿಗೆ ಕಚ್ಚಿದ ನಾಗರ ಹಾವು: ಮಗುವಿನ ಸ್ಥಿತಿ ಗಂಭೀರ

ಸುಮಾರು 7 ವರ್ಷದ ಮಗುವಿಗೆ ನಾಗರ ಹಾವು ಕಚ್ಚಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ಕೋಡಿಹಳ್ಳಿ ಬಳಿ‌ ಇಂದು ಮಧ್ಯಾಹ್ನ ನಡೆದಿದೆ.

ಕೋಡಿಹಳ್ಳಿ ಸಮೀಪ ಕೂಲಿ ಕೆಲಸಕ್ಕಾಗಿ ಬಂದಿದ್ದ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ಕುಟುಂಬದ ಅಮೀದ್ ಕುಮಾರ್ ಎಂಬ ಏಳು ವರ್ಷದ ಮಗುವಿಗೆ ನಾಗರ ಹಾವು ಕಚ್ಚಿದೆ.

ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಮಗುವಿನ ಪರಿಸ್ಥಿತಿ ಬಹಳ ಗಂಭೀರವಾಗಿದ್ದರಿಂದ ಉಸಿರಾಟ ಬಹುತೇಕ ನಿಂತು ಹೋಗಿತ್ತು.

ಡಾ ರಾಜು, ಡಾ ವಿಜಯ ರವರ ತುರ್ತು ಚಿಕಿತ್ಸೆಯ ಸತತ ಪ್ರಯತ್ನದ ಫಲವಾಗಿ ಮಗು ಸ್ವಲ್ಪ ಮಟ್ಟಿಗೆ ಉಸಿರಾಟ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ದೀಪು, ರಂಜಿತ, ಭವ್ಯ ನರ್ಸ್ ಗಳು, ಸಿಬ್ಬಂದಿ ವಿಜಯ್ ಸಹಾಯ ಮಾಡಿದರು.

ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ನಲ್ಲಿ ಚಾಲಕ ಮಧು ಅವರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮಕ್ಕಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿರುತ್ತದೆ.

ಸದ್ಯ ಮಗುವಿನ ಆರೋಗ್ಯ ಸ್ಥಿತಿ ಈಗಲೂ ಗಂಭೀರವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುತ್ತದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪುಟ್ಟ ಬಾಲಕ ಗುಣಮುಖಲಾಗಲೆಂದು ಹಾರೈಸಲಾಗಿದೆ.

Leave a Reply

Your email address will not be published. Required fields are marked *

error: Content is protected !!