ಕನ್ನಡ ಉಪನ್ಯಾಸಕನಿಂದ ಯುವತಿಗೆ ಪ್ರೇಮ ಪಾಠ: ಮದುವೆ ಆಗಿದ್ದರೂ ಹಳೇ ವಿದ್ಯಾರ್ಥಿನಿ ಜೊತೆ ಚಕ್ಕಂದ: ಹೆಂಡತಿ‌‌ ಮಕ್ಕಳನ್ನ ಬಿಟ್ಟು ಯುವತಿ ಜೊತೆ ಜಂಪ್: ಸದ್ಯ ಪೊಲೀಸರ ಅತಿಥಿ

ಮುಂದೆ ಗುರಿ ಹಿಂದೆ ಗುರು ಇರಬೇಕು ಎಂಬ ಗಾದೆ ಮಾತಿದೆ. ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಕರನ್ನ ನಂಬಿ ವಿದ್ಯಾಭ್ಯಾಸಕ್ಕಾಗಿ ಶಾಲಾ ಕಾಲೇಜಿಗೆ ಕಳಿಸುತ್ತಾರೆ. ಆದರೆ, ಇಲ್ಲೊಬ್ಬ ಕನ್ನಡ ಉಪನ್ಯಾಸಕ ತಾನು ಪಾಠ ಮಾಡಿದ ವಿದ್ಯಾರ್ಥಿನಿ ಜೊತೆ ಚಕ್ಕಂದ ಆಡಿದ್ದೂ ಅಲ್ಲದೆ, ಆಕೆಯನ್ನ ಕರೆದುಕೊಂಡು ಎಸ್ಕೇಪ್ ಆಗಿ, ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾನೆ. ಅಷ್ಟಕ್ಕೂ ಆ ಘಟನೆ ನಡೆದದ್ದು ಎಲ್ಲಿ, ಯಾರೂ ಆ ಉಪನ್ಯಾಸಕ ಎನ್ನುತ್ತೀರಾ ಈ ಸ್ಟೋರಿ ಓದಿ……

ಹೌದು, ಸಾರ್ವಜನಿಕ‌ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ವೇಳೆ, ತಲೆ ತಗ್ಗಿಸಿಕೊಂಡು ಹೋಗುತ್ತಿರುವ ಉಪನ್ಯಾಸಕ, ಈ ಫೋಟೋದಲ್ಲಿ ಕಾಣಿಸುತ್ತಿರುವ ಉಪನ್ಯಾಸಕನ ಹೆಸರು ಪ್ರವೀಣ್…. ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಪ್ರತಿಷ್ಟಿತ ಸರ್ಕಾರಿ ಅನುದಾನಿತ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಎನ್‌ಸಿಸಿ ಅಧಿಕಾರಿ (ಲೆಫ್ಟಿನೆಂಟ್) ಆಗಿದ್ದ.

ಈ ವೇಳೆ ಮಕ್ಕಳಿಗೆ ಶಿಸ್ತಿನ ಪಾಠ ಹೇಳುತ್ತಿದ್ದ ಈತನೇ ಶಿಸ್ತು ತಪ್ಪಿದ್ದಾನೆ. ತನಗೆ ಮದುವೆ ಆಗಿ ಎರಡು ಮಕ್ಕಳಿದ್ದರೂ ಹೆಂಡತಿಗೆ ಕಿರುಕುಳ ನೀಡಿ, ತನ್ನ ವಿದ್ಯಾರ್ಥಿನಿ ಜೊತೆಯಲ್ಲಿ ಚಕ್ಕಂದ ಆಡಿ ಎಸ್ಕೇಪ್ ಆಗಿದ್ದಾನೆ. ಪೋಲೀಸರು ಬಂಧಿಸುವ ವೇಳೆ ಇಬ್ಬರೂ ನಿದ್ದೆ ಮಾತ್ರೆ ನುಂಗಿ ಹೈಡ್ರಾಮ ಮಾಡಿದ್ದಾರೆ.

ಇನ್ನೂ ಯುವತಿಗೆ ಮದುವೆ ನಿಶ್ಚಯ ಆಗಿತ್ತಂತೆ. ಮದುವೆ ಹತ್ತಿರ ಆಗುತ್ತಿದ್ದಂತೆ ಯುವತಿ ಆಗಸ್ಟ್ 2 ರಂದು ಮನೆ ಬಿಟ್ಟು ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ಯುವತಿ ಪೋಷಕರು ಭಯಪಟ್ಟು ಮಿಸ್ಸಿಂಗ್ ದೂರನ್ನು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಆದರೆ, ದೂರು ದಾಖಲಿಸಿಕೊಂಡ ಪೊಲೀಸರು ಸೂಕ್ತ ತನಿಖೆ ನಡೆಸಿ, ತನಿಖೆಯಲ್ಲಿ ಈ ಉಪನ್ಯಾಸಕ ಕರೆದುಕೊಂಡು ಹೋಗಿರುವುದು ತಿಳಿದು ಬಂದಿದೆ. ಮೊದಲು ಯುವತಿಯನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದಾನೆ‌. ನಂತರ ದೂರು ದಾಖಲಾದ ಮೇಲೆ ಬೆಂಗಳೂರಿನ ಎಸ್ಪಿ ಕಚೇರಿಗೆ ಬಂದು ಎಸ್ಪಿ ಮುಂದೆ ಯುವತಿ ಹೇಳಿಕೆ ನೀಡಿದ್ದಾಳೆ. ನಂತರ ಶಿಕ್ಷಕನೊಂದಿಗೆ ಎಸ್ಕೇಪ್ ಆಗಿ ಪೊಲೀಸರಿಗೆ ಚಳ್ಳೆ‌ಹಣ್ಣು ತಿನ್ನಿಸಿದ್ದಾರೆ. ಸ್ನೇಹಿತರ ಹೆಸರ ಮೇಲೆ ದಿನಕ್ಕೆ ಒಂದು ಸಿಮ್ ಬದಲಿಸಿಕೊಂಡು ಪೊಲೀಸರಿಗೆ ಮಾಹಿತಿ ಸಿಗದ ರೀತಿ ಮಾಡಿದ್ದಾನೆ. ಹಲವು ದಿನಗಳ ಕಾರ್ಯಾಚರಣೆ ನಂತರ ಆನೇಕಲ್ ನಲ್ಲಿ ಲಾಡ್ಜ್ ಒಂದರಲ್ಲಿ ಇದ್ದ ಮಾಹಿತಿ ತಿಳಿದ ಮಹಿಳಾ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ ನೇತೃತ್ವದ ತಂಡ ಕೂಡಲೇ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಇನ್ನೂ ಶಿಕ್ಷಕನ ಹೆಂಡತಿಗೆ ಎರಡು ಮಕ್ಕಳಿದ್ದು, ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದನಂತೆ. ಅದೇ ರೀತಿ ಬೇರೆ ಯುವತಿಯರಿಗೂ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಎಂದು ಹೆಂಡತಿ ಆರೋಪ ಮಾಡಿದ್ದಾರೆ.

ಒಟ್ಟಾರೆ, ಪಾಠ ಹೇಳಿಕೊಟ್ಟ ಶಿಕ್ಷಕನೇ ಯುವತಿಯ ಜೊತೆಯಲ್ಲಿ ಚಕ್ಕಂದವಾಡಿ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಇನ್ನೂ ಘಟನೆ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಶಿಕ್ಷಕನನ್ನು ವಜಾ ಮಾಡಿದೆ. ಉಪನ್ಯಾಸಕನನ್ನು ಬಂಧಿಸಿದ ಪೊಲೀಸರು ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!