
ದೊಡ್ಡಬಳ್ಳಾಪುರ ನಗರದ ಹೇಮಾವತಿಪೇಟೆಯ ನಗರಸಭಾ ಸದಸ್ಯ ಭಾಸ್ಕರ್ (55) ಅನಾರೋಗ್ಯದ ಕಾರಣ ಸೋಮವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಭಾಸ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಸೋಮವಾರ) ಮುಂಜಾನೆ ಮೃತಪಟ್ಟಿದ್ದಾರೆ.
ಮೃತರು ಮಡದಿ ಮತ್ತು ಮಗನನ್ನು ಅಗಲಿದ್ದಾರೆ.
ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 9 ಗಂಟೆ ಬಳಿಕ ಹೇಮಾವತಿ ಪೇಟೆಯ ಸ್ವಗೃಹದ ಬಳಿ ಅವಕಾಶ ಕಲ್ಪಿಸಲಾಗುತ್ತಿದೆ.
ಅಂತ್ಯಕ್ರಿಯೆ ಮುಕ್ತಿಧಾಮದಲ್ಲಿ ನಡೆಯಲಿದ್ದು, ಸಮಯ ನಿಗದಿಯಾಗಿಲ್ಲವೆಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ ಛಾಯಾಗ್ರಾಹಕರ ಸಂಘದ ಮಾಜಿ ನಿರ್ದೇಶಕರಾಗಿ, ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಭಾಸ್ಕರ್ ಅವರು ನಗರಸಭೆಗೆ ಎರಡನೇ ಭಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದರು.
ಭಾಸ್ಕರ್ ಅಗಲಿಕೆಗೆ ಶಾಸಕ ಧೀರಜ್ ಮುನಿರಾಜ್, ನಗರಸಭಾ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ದೊಡ್ಡಬಳ್ಳಾಪುರ ಫೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸದಸ್ಯರು ಶ್ರದ್ಧಾಂಜಲಿ ಕೋರಿದ್ದಾರೆ.