RCB ಬೌಲಿಂಗ್ ಗೆ ಕ್ಲೀನ್ ಬೋಲ್ಡ್ ಆದ ರಾಜಸ್ತಾನ್ ಬ್ಯಾಟಿಂಗ್

ಬೆಂಗಳೂರು ತಂಡದ ಉತ್ತಮ ಬೌಲಿಂಗ್ ನೆರವಿನಿಂದ ರಾಜಸ್ತಾನ್ ರಾಯಲ್ಸ್ ತಂಡವನ್ನು 59 ರನ್ ಗೆ ಆಲ್ ಔಟ್ ಮಾಡಿ 127 ರನ್ ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿಯು ಹೋರಾಟದ ಟಾರ್ಗೆಟ್ ನೀಡಿತು. ಆರಂಭಿಕ ಬ್ಯಾಟ್ಸಮನ್ ಗಳ ಅರ್ಧ ಶತಕದ ಜೊತೆಯಾಟದ ನಂತರ ವಿರಾಟ್ ಕೊಹ್ಲಿ ಅವರು ಕೆ.ಎಮ್ ಆಸೀಫ್ ಗೆ ವಿಕೆಟ್ ಒಪ್ಪಿಸಿದರು. ದುಫ಼್ಲೆಸಿಸ್ (55), ಮ್ಯಾಕ್ಸ್ ವೆಲ್ (54), ಅನುಜ್ ರಾವತ್(29) ರವರ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿದರು.

ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಯಶಸ್ವಿ ಜೈಸ್ವಲ್(0), ಜೋಸ್ ಬಟ್ಲರ್ (0), ಸಂಜು (4) ಬೇಗನೆ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಹೆಟ್ ಮೇಯರ್ (35) ಹೊರತುಪಡಿಸಿ ಉಳಿದ ಯಾವ ಬ್ಯಾಟ್ಸಮನ್ ಗಳೂ ಸಹ ತಂಡಕ್ಕೆ ಕಾಣಿಕೆ ನೀಡಲಿಲ್ಲ. ಒಟ್ಟಾರೆ 59 ರನ್ ಗೆ ತನ್ನ ಎಲ್ಲಾ ವಿಕೆಟ್ ಕಳೆದು ಕೊಂಡಿತು. ಪಾರ್ನೆಲ್ ಗೆ 3 ವಿಕೆಟ್ ಬ್ರೆಸ್ ವೆಲ್ ಮತ್ತೆ ಕರಣ್ ಶರ್ಮಾಗೆ ತಲಾ 2 ವಿಕೆಟ್ ಪಡೆದು ಮಿಂಚಿದರು.

ಮೂರು ವಿಕೆಟ್ ಪಡೆದ ಪಾರ್ನೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು

Leave a Reply

Your email address will not be published. Required fields are marked *