ಜಿಲ್ಲಾ ಬಾಲಕಾರ್ಮಿಕ ಯೋಜನೆಯಲ್ಲಿ ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಗೌರವಧನ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನಾ ನಿರ್ದೇಶಕ 01 ಹುದ್ದೆಗೆ ಮಾಸಿಕ ಗೌರವಧನ 31,763 ಹಾಗೂ ಪ್ರಯಾಣ ಭತ್ಯೆ 3,000 ನೀಡಿ 1 ವರ್ಷ ಅವಧಿ ವರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಯೋಜನಾ ನಿರ್ದೇಶಕ ಹುದ್ದೆಗೆ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ ಎಂ.ಎಸ್.ಡಬ್ಲೂ/ ಅಭಿವೃದ್ಧಿ ಅಧ್ಯಯನ/ ಲಾಭರಹಿತ ಸಂಸ್ಥೆಗಳ (ಎನ್ ಜಿಒ ) ನಿರ್ವಹಣಾ ಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಿವಿಧ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಕುರಿತು 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆಯನ್ನು ನೀಡಲಾಗುವುದು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ (MS Office, MS Excel & MS Powerpoint & Internet Operation.). ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. 40 ವಯೋಮಾನ ಮೀರಿರಬಾರದು. ಕಛೇರಿಯ ಲೆಕ್ಕಪತ್ರಗಳ ವ್ಯವಹಾರವನ್ನು ಅರಿತಿರಬೇಕು. ಕಛೇರಿಯ ಲೆಕ್ಕಪತ್ರಗಳ ವ್ಯವಹಾರವನ್ನು ಅರಿತಿರಬೇಕು. ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳಾಗಿರಬಾರದು.
ಗುಮಾಸ್ತ ಕಂ ಲೆಕ್ಕಿಗ 01 ಹುದ್ದೆಗೆ ಮಾಸಿಕ ಗೌರವಧನ 21,909 ನೀಡಿ 1 ವರ್ಷ ಅವಧಿ ವರೆಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಬಿ.ಕಾಂ ಪದವಿ ಹೊಂದಿರಬೇಕು. ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ/ ಅಕೌಂಟೆಂಟ್ ಹುದ್ದೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ಲೆಕ್ಕ ಪತ್ರದಲ್ಲಿ ಬ್ಯಾಂಕ್ ವ್ಯವಹಾರಗಳನ್ನು, ಸರ್ಕಾರದ ಲೆಕ್ಕಪತ್ರಗಳನ್ನು ತಯಾರಿಸುವ ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲಾತಿಗಳು, ರಿಜಿಸ್ಟರ್ಗಳ ಕುರಿತು ಮಾಹಿತಿಯನ್ನು ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ. ಟ್ಯಾಲಿ ಸಾಪ್ಟವೇರ್ ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. 40 ವಯೋಮಾನ ಮೀರಿರಬಾರದು. ಕಛೇರಿಯ ಪತ್ರ ವ್ಯವಹಾರಗಳು, ಲೆಕ್ಕಪತ್ರಗಳ ವ್ಯವಹಾರವನ್ನು ಗಣಕೀಕೃತದಲ್ಲಿ ನಮೂದಿಸಿ. ಕೇಂದ್ರ ಕಛೇರಿಗಳಿಗೆ ಗಣಕ ಯಂತ್ರ ಮೂಲಕ ಕಳುಹಿಸುವ ಕುರಿತು ಪರಿಣತಿ ಹೊಂದಿರಬೇಕು.
ಅರ್ಹ ಅಭ್ಯರ್ಥಿಗಳು ಆಗಸ್ಟ್ 20 ರೊಳಗಾಗಿ ಕಾರ್ಮಿಕ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ- ಜಿಲ್ಲಾ ಬಾಲಕಾರ್ಮಿಕ ಯೋಜನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, 5 ನೇ ಮುಖ್ಯ ರಸ್ತೆ, 2 ನೇ ಹಂತ, ಸೋಮೇಶ್ವರ ಬಡಾವಣೆ, ದೊಡ್ಡಬಳ್ಳಾಪುರ-561203 ಇಲ್ಲಿ ನೇರವಾಗಿ ಅರ್ಜಿ ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-27622133, ಇಮೇಲ್ ವಿಳಾಸ lobngrural@gmail.com ಅಥವಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಕಾರ್ಮಿಕ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.