ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕರಾದ ‘ಬಂಜೆಗೆರೆ ಜಯಪ್ರಕಾಶ್ ‘ಮಾತನಾಡಿ,”ಸೂಫಿಗಳು ಇಲ್ಲಿನ ಭಾಷೆಗಳನ್ನ ಕಲಿತರು. ನಂತರ ದೇವರನ್ನ ಒಂದು ಆಕೃತಿಗೆ ಹೋಲಿಸದೆ ಎಲ್ಲಾ ಕಡೆ ದೇವರ ಇರುವಿಕೆಯ ನಂಬಿಕೆಯನ್ನ ಕಾಣುತ್ತಾರೆ. ಪ್ರೀತಿಯಿಂದ ಬದುಕಿನಲ್ಲಿ ಧರ್ಮ ಕಾಣುತ್ತಾರೆ. ನಿರಾಕರ ಭಾವದಿಂದಲೇ ಸರಿಯೆಂದು ಭಾವಿಸಿದರು..ಪ್ರೇಮ ತತ್ವ, ಇತರರನ್ನ ಗೌರವ ಸೂಚಿಸುವ ಧರ್ಮ ಸೂಫಿಯಲ್ಕಿ ಕಂಡು ಬರಲಿಲ್ಲ. ಸೂಫಿಗಳಲ್ಲಿ ಹಲವಾರು ಪಂಗಡಗಳು ಇವೆ. ಇವರು ಜನಪ್ರಿಯರಾಗಲು ಗುರುಗಳಿಂದ ದೇವರನ್ನ ನಂಬುತ್ತಾರೆ. ಈ ಧರ್ಮವನ್ನ ಅನುಸರಿಸುವವರು ಕಮ್ಮಿ. ರಾಜಾಸತ್ತೆ ಧರ್ಮವಾಗಿ ಉಳಿಯಲಿಲ್ಲ ಇಂದು ಹೆಚ್ಚಾಗಿ ಇದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ಕನ್ನಡ ಸಂಸ್ಕೃತಿ ವಿಶ್ವಕ್ಕೆ ಕಾಣುವಂತಾಗಲಿ” ಎಂದು ಅಭಿಪ್ರಾಯಪಟ್ಟರು.

ಸಿಂಡಿಕೇಟ್ ಸದಸ್ಯ ಡಾ. ಷರೀಫಾ ಸಿಂಡಿಕೇಟ್ ಸದಸ್ಯರ ಮಾತನಾಡಿ, “ಸೂಫಿಲೋಕ ದೇವರನ್ನ ಮನುಷ್ಯರಲ್ಲಿ ಕಂಡವರು. ಇವರು ಶಿಕ್ಷಿತರವರಾಗಿರಲಿಲ್ಲ. ಇವರ ಬಗ್ಗೆ ಒಂದು ದೊಡ್ಡ ಚರಿತ್ರೆ ಇದೆ. ಸಂಪ್ರದಾಯಗಳನ್ನ ಒಪ್ಪದ ಸೂಫಿಗಳನ್ನ ಮುಸ್ಲಿಂ ಅಲ್ಲವೆಂದರು. ಮನುಷ್ಯನ ಅಂಧಾಕಾರವನ್ನ ಹೋಗಲಾಡಿಸಲು ಇವರು ಸಾಕಷ್ಟು ಪ್ರಯತ್ನಿಸಿದರು. ಸೂಫಿಗಳಲ್ಲಿ ಮಹಿಳೆಯರು ಕಂಡುಬರುತ್ತಾರೆ. ಆದರೂ ಕೆಲವು ಮಹಿಳೆಯರ ಬಗ್ಗೆ ಇತಿಹಾಸ ದಾಖಲಾಗಲಿಲ್ಲ. ಇಂದಿನ ಯುವ ಜನಾಂಗ ಕೋಮುವಾದಕ್ಕೆ ಒಳಗಾಗದೆ ಸೂಫಿತತ್ವಗಳನ್ನ ಅಳವಡಿಸಿಕೊಂಡು ಸೋದರತ್ವ ಬೆಳಸಬೇಕಿದೆ.
ಎಂದರು.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡೊಮಿನಿಕ್ ಮಾತನಾಡಿ, “ತಳಸಮುದಾಯಗಳ ದೈವಗಳಾಗಿರುವ ಮಾದಪ್ಪ, ಮಂಟೇಸ್ವಾಮಿ, ಚೆನ್ನಮ್ಮಾಜಿ ಮುಂತಾದವರು, ದಕ್ಷಿಣದಿಂದ ಉತ್ತರಕ್ಕೆ ಹೋಗಿ ಕೊಡೇಕಲ್ ಬಸವಣ್ಣ ರಿಗೆ ಭೇಟಿಯಾಗಿ ಅಲ್ಲಿಂದ ಪ್ರೇರಣೆ ಪಡೆದು ದಕ್ಷಿಣಕ್ಕೆ ಪುನಃ ಬಂದು. ಇಲ್ಲಿನ ತಳಸಮುದಾಯಗಳ ಬದುಕಿಗಾಗಿ ಜೀವತೇದವರು. ಹಾಗಾದರೆ ನಮ್ಮ ಎದುರಿಗೆ ನಿಲ್ಲುವ ಪ್ರಶ್ನೆ ಯಾವುದು ಬಸವಣ್ಣ ಕ್ರಾಂತಿಗೆ ಸೇರಿದವರಾಗಿದ್ದೇವೆಯಾ ಅಥವಾ ‘ಸೂಫಿ ‘ಪಂಥಕ್ಕೆ ಸೇರಿದವರಾ ಎಂಬ ಪ್ರಶ್ನೆ ಈವತ್ತಿಗೂ ಸಹ ಅಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಆ ಪರಂಪರಗೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲಿರುವ ಗದ್ದುಗೆ ಇಬ್ಬರಿಗೂ ಸೇರಿದ್ದರಿಂದ ಮತ್ತೆ ಮತ್ತೆ ಅದರ ಐಕ್ಯತೆ ಎದ್ದು ಕಾಣುತ್ತಿದೆ ಮತ್ತು ತಳ ಸಮುದಾಯಗಳಿಗೆಲ್ಲಾ ಚೈತನ್ಯ ತುಂಬುವ ತಾಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದಂತಹ ಬೆಂ. ವಿ. ವಿದ್ಯಾಲಯದ ಕುಲಪತಿ ಡಾ. ಜಯಕರ್. ಎಸ್. ಎಂ ಮಾತನಾಡಿ.”ಇಂದಿನ ದಿನಗಳಲ್ಲಿ ಮನುಷ್ಯ ಮನುಷ್ಯರನ್ನ ಪ್ರೀತಿಸುವ ಗುಣವನ್ನ ಮರೆತಿದ್ದಾನೆ .ಇದೆ ಅನಾಹುತಕ್ಕೆ ಕಾರಣವಾಗುತ್ತಿದೆ.ಎಲ್ಲಾ ಧರ್ಮಗಳು ಇರುವುದು ಒಳ್ಳೇಯದನ್ನ ಬಯಸುವುದಕ್ಕೆ ವಿನಃ ಕೆಟ್ಟದನ್ನ ಬಯಸುವುಕ್ಕೆಲ್ಲ. ಇಂದು ನಾವುಗಳು ಮಾನವೀಯತೆಯನ್ನ ಕಳೆದುಕೊಳ್ಳುತ್ತಿದ್ದೇವೆ. ಯಾವುದೆ ಧರ್ಮ -ಜಾತಿಯವರಾಗಿರಲಿ ಮಾನವೀಯ ಗುಣ ಬೆಳಸಿಕೊಳ್ಳಬೇಕು. ‘ಸೂಫಿ’ ಒಂದು ಆಧ್ಯಾತ್ಮಕ ಮಾರ್ಗ. ನಮ್ಮ ವಿದ್ಯಾರ್ಥಿಗಳು ನಾಡಿನ ವಿವಿಧ ಸಂಸ್ಕೃತಿಯನ್ನ ಅರಿಯಬೇಕಿದೆ” ಎಂದರು.

ಕಾರ್ಯಕ್ರದಲ್ಲಿ, ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಚಿತ್ತಯ್ಯ ಪೂಜಾರ್ , ಡಾ. ಬಿ ಗಂಗಾಧರ್,
ಡಾ. ವಡ್ದೆ ಹೇಮಲತಾ, ಡಾ. ಸುಮಿತ್ರ ಎಂ, ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳು, ಕರ್ನಾಟಕ ಸಂಘದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!