ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್ ಮೇಲೆ ದುಷ್ಕರ್ಮಿಗಳು ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಆರೋಪ ಮಾಡಿದ್ದಾರೆ.

ಈ ಘಟನೆ ಸಂಬಂಧ ಲಾಯರ್ ಜಗದೀಶ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಜೊತೆಗೆ ಈ ಕುರಿತು ಪ್ರಥಮ್ ಜೊತೆ ಲಾಯರ್ ಜಗದೀಶ್ ಫೋನ್ ಕಾಲ್ ಮೂಲಕ ಮಾತಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.

ದೊಡ್ಡಬಳ್ಳಾಪುರ ಬಳಿಯ ದೇವಾಲಯದ ಪೂಜಾ ಕಾರ್ಯಕ್ರಮಕ್ಕೆ ನಟ ಪ್ರಥಮ್ ಬಂದಾಗ ರೌಡಿಗಳ ಗುಂಪು ಆತನನ್ನು ದೇವಾಲಯದ ಬಳಿಯ ತೋಟಕ್ಕೆ ಕರೆದುಕೊಂಡು ಹೋಗಿ ಡ್ರಾಗರ್, ಲಾಂಗು ಸೇರಿದಂತೆ ಹರಿತವಾದ ಆಯುಧಗಳನ್ನು ಇಟ್ಟು ಹಲ್ಲೆ ಮಾಡಿದ್ದಾರೆಂದು ಲಾಯರ್ ಜಗದೀಶ್ ಆರೋಪಿಸಿದ್ದಾರೆ.

ಇನ್ನು, ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್ಪೆಕ್ಟರ್ ಸಾದಿಕ್ ಪಾಷ ಅವರು ಖುದ್ದು ನಟ ಪ್ರಥಮ್ ಅವರಿಗೆ ಕರೆ ಮಾಡಿ ದೂರು ನೀಡುವಂತೆ ಕೇಳಿದ್ದು, ಇದಕ್ಕೆ ಪ್ರಥಮ್ ಪ್ರತಿಕ್ರಿಯೆ ನೀಡಿಲ್ಲ ಎಂದು ಸಹ ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.

ಹಲ್ಲೆ ಮಾಡುವ ವೇಳೆ ರೌಡಿಗಳ ಗುಂಪಿನೊಂದಿಗೆ ದಿ.ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಸಹ ಇದ್ದರು ಎಂದು ಸಹ ಆರೋಪಿಸಿದ್ದು, ಒಬ್ಬ ಸೆಲೆಬ್ರೆಟಿಗೆ ರಕ್ಷಣೆ ಇಲ್ಲದೆ ಹೋದರೆ ಹೇಗೆ ಎಂದು ಗೃಹ ಸಚಿವ ಪರಮೇಶ್ವರ್ ಹಾಗು ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್ಪಿ ಅವರನ್ನ ಪ್ರಥಮ್ ಭೇಟಿ…!

ಘಟನೆ ಕುರಿತು ಮಾಹಿತಿ ನೀಡಲು ಪ್ರಥಮ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರನ್ನು ಭೇಟಿಯಾಗಿ ಘಟನೆ ಹೇಗಾಯ್ತು, ಯಾರೆಲ್ಲಾ ಇದ್ರೂ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದಿಬಂದಿದೆ.

ಬೆಂ.ಗ್ರಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯೆ….!

ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ ಬೆದರಿಕೆ ಆರೋಪ ಕೇಳಿ ಬಂದಿದೆ. ದೊಡ್ಡಬಳ್ಳಾಪುರದಲ್ಲಿರುವ ದೇವಸ್ಥಾನವೊಂದಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಪ್ರಥಮ್ ಅವರನ್ನು ಈಗಾಗಲೇ ಕರೆದು ಮಾತಾಡಿದ್ದೇನೆ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಪ್ರಥಮ್ ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತೀವಿ ಎಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ಮೇಲೆ ಹಲ್ಲೆ ಆರೋಪ ಪ್ರಕರಣದ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಪ್ರತಿಕ್ರಿಯೆ ನೀಡಿದ್ದಾರೆ…‌

“so called Don’t ಗಳನ್ನ ಸುಮ್ಮನೆ ಬಿಡೋ ಮಾತೇ ಇಲ್ಲ”- ಪ್ರಥಮ್

ನನ್ನಲ್ಲಿ ಒಳ್ಳೇತನ ಇರೋದಕ್ಕೆ 4 ದಿನದಿಂದ ಕೇಸ್ ಬಗ್ಗೆ ಎಲ್ಲೂ ಹೊರಗೆ ಮಾತಾಡಿಲ್ಲ! ನನ್ನಿಂದ ಯಾರಿಗೂ ತೊಂದರೆ ಆಗ್ಬಾರ್ದು ಅಂತ‌…!ಅದ್ರೂ ಬಲವಂತ ಮಾಡಿ ಮಾತಾಡಿಸಿ ಅದನ್ನ audio record ಮಾಡಿದ್ರೆ ನಾನೇನು ಹೇಳಲಿ ಹೇಳಿ?Weapon ತೋರಿಸಿ ಕೊಲೆ ಬೆದರಿಕೆ ಹಾಕಿದ so called Don’t ಗಳನ್ನ ಸುಮ್ಮನೆ ಬಿಡೋ ಮಾತೇ ಇಲ್ಲ! ಎಂದು ಒಳ್ಳೆ ಹುಡುಗ ಪ್ರಥಮ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿಕೊಂಡಿದ್ದಾರೆ.

ಈ ಘಟನೆ ನಡೆದಿದ್ದು ನಿಜ- ಪ್ರಥಮ್

ನಾಲ್ಕು ದಿನಗಳಿಂದೆ ಈ ಘಟನೆ ನಡೆದಿದ್ದು ನಿಜ, ನನ್ನ ಕೆಲಸದಲ್ಲಿ busy ಇದ್ದೆ, ಜಗದೀಶ್ ಅವರು ಫೋನ್ ಮಾಡುತ್ತಲೇ ಇದ್ದರು ಅಂತಾ ಮಾತಾಡಿದೆ‌. ಅದನ್ನ ರೆಕಾರ್ಡ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಾಕಬೇಕಿರಲಿಲ್ಲ. ನಾನು ಹೇಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿದಿದೆ..! ನಂಬಿಕೆ ಇಟ್ಟು ಮಾತಾಡಿದಾಗ ರೆಕಾರ್ಡ್ ಮಾಡಿ ಹಾಕಿದ್ದರಿಂದ ಇನ್ಮೇಲೆ ಹೇಗೆ ನಂಬೋದು ಹೇಳಿ..? ಎಂದು ಪ್ರಥಮ್ ಹೇಳಿದ್ದಾರೆ….

Leave a Reply

Your email address will not be published. Required fields are marked *

error: Content is protected !!