ಮಡಿಕೇರಿ ತಾಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ಹಾಡ ಹಗಲೇ ಕುಡಿಯಲು ನೀರು ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಚಿನ್ನದ ಸರ ದೋಚಿ, ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿ ಹಣ್ಣು ಗಾಯಿ ನೀರು ಗಾಯಿಯಾದ ಘಟನೆ ನಡೆದಿದೆ.
ಗ್ರಾಮದ ಸಾರಮ್ಮ ಎಂಬುವವರು ತನ್ನ ಸೊಸೆಯೊಂದಿಗೆ ವಾಸದಲ್ಲಿದ್ದ ಮನೆಗೆ ಆಗಮಿಸಿದ ಕಳ್ಳ ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದು, ಕುಡಿಯಲು ನೀರು ಬೇಕು ಎಂದು ಕೇಳಿದ್ದಾನೆ. ನೀರು ತಂದು ಕೊಡುತ್ತಿದ್ದಂತೆ ಆಕೆಯ ಕುತ್ತಿಗೆಯಲ್ಲಿದ ಸರಕ್ಕೆ ಕೈ ಹಾಕಿದ್ದು, ಮಹಿಳೆ ಪ್ರತಿರೋಧ ತೋರಿಸಿದಕ್ಕೆ ಕೈ ನಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿ ಸರ ಕಿತ್ತು ಪರಾರಿಯಾಗಿದ್ದಾನೆ.
ತಕ್ಷಣ ಏಚೆತ್ತುಕೊಂಡ ಗ್ರಾಮದ ಯುವಕರು ಗ್ರಾಮದಲ್ಲಿ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದು, ಈ ಸಂದರ್ಭ ಕಾಫಿ ತೋಟವೊಂದರಲ್ಲಿ ಅವಿತು ಕುಳಿತಿದ್ದ ಕಳ್ಳ ಪಾಲಿಬೆಟ್ಟ ಗ್ರಾಮದ ಹ್ಯಾರಿಸ್ ಪುತ್ರ ಮನಾವರ್ ನಿಗೆ ಆಳಿಗೆ ಒಂದು ಎಟ್ಟು ಎನ್ನುವಂತೆ ಕೊಟ್ಟು ಪೊಲೀಸರಿಗೆ ಒಪ್ಪಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.