
ಕೌಟುಂಬಿಕ ಕಲಹ ಹಿನ್ನೆಲೆ ಕುಟುಂಬ ಸದಸ್ಯರ ಜಗಳದಲ್ಲಿ ಮನೆಗೆ ಬೆಂಕಿ ಬಿದ್ದಿದೆ. ಎರಡು ಅಂತಸ್ತಿನ ಮನೆ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯ ಶ್ರೀಕೊಂಗಾಡಿಯಪ್ಪ ಕಾಲೇಜ್ ಬಳಿ ಇಂದು ಸಂಜೆ ಘಟನೆ ನಡೆದಿದೆ.
ಬೆಂಕಿ ಅವಘಡದಲ್ಲಿ ಗೌತಮ್ ರವರಿಗೆ ಸೇರಿದ ಮನೆ ಹೊತ್ತಿ ಉರಿದಿದೆ, ಬೆಂಕಿ ಜ್ವಾಲೆಗೆ ಎರಡು ಅಂತಸ್ತಿನ ಮನೆ ಹೊತ್ತಿ ಉರಿದಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ.

ಅವಘಡದಲ್ಲಿ ಮನೆಯಲ್ಲಿ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.