
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ ಹೋಬಳಿ, ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ ನಂಬರ್ 100/1 ರಲ್ಲಿ 0.02.08 ಗುಂಟೆ ಜಮೀನನ್ನು ಎಂ.ನಾರಾಯಣ ಸ್ವಾಮಿ ಬಿನ್ ಮುನಿ ಸುಬ್ಬಯ್ಯ, ನಾಗರಾಜ್ ಬಿನ್ ಲೇಟ್ ಮದ್ದೂರಪ್ಪ, ಕೆ.ಪಿ. ನರೇಂದ್ರಬಾಬು ಬಿನ್ ಪಿಳ್ಳ ಮನಿಯಪ್ಪ ಎಂಬುವರಿಗೆ ದಿನಾಂಕ: 10/01/2024 ರ ನ್ಯಾಯಾಲಯದ ಶುದ್ಧ ಕ್ರಯಪತ್ರದಂತೆ ಕ್ರಯಕ್ಕೆ ಪಡೆದಿರುತ್ತಾರೆ.

ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ರವರ ನ್ಯಾಯಾಲಯದಲ್ಲಿ 0.S.No-8/2018 ರಂತೆ ಡಿಕ್ರಿ ಸಹ ಆಗಿರುತ್ತದೆ. ನ್ಯಾಯಾಲಯದ ಶುದ್ಧ ಕ್ರಯಪತ್ರವು ನೊಂದಣಿಯಾಗಿರುತ್ತದೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ದೊಡ್ಡಬಳ್ಳಾಪುರ ಪ್ರಕರಣ ಸಂಖ್ಯೆ: R.A(ದೊ) 241/2024 ರಂದು ಕೇಸು ಸಹ ದಾಖಲಾಗಿದ್ದು, ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ ನಂಬರ್. 100/1 ರಲ್ಲಿ 0.02.08 ಗುಂಟೆ ಜಮೀನಿಗೆ ನೊಂದಾಯಿತ ಕ್ರಯಪತ್ರದ ಸಂಖ್ಯೆ: 13123/2023/2024 ದಿನಾಂಕ: 18/01/2024 ರಂತೆ ವೈ.ಎಂ.ನಾರಾಯಣ ಸ್ವಾಮಿ ಬಿನ್ ಮುನಿಸುಬ್ಬಯ್ಯ, ನಾಗರಾಜ್ ಬಿನ್ ಲೇಟ್ ಮದ್ದೂರಪ್ಪ, ಕೆ.ಪಿ. ನರೇಂದ್ರಬಾಬು ಬಿನ್ ಪಿಳ್ಳ ಮನಿಯಪ್ಪ ರವರ ಹೆಸರಿಗೆ ಜಂಟಿ ಖಾತೆ ವರ್ಗಾವಣೆ ಮಾಡಲು ನ್ಯಾಯಾಲಯವು ದಿನಾಂಕ: 15/04/2025 ರಂದು, ಎಂ.ನಾರಾಯಣ ಸ್ವಾಮಿ ಬಿನ್ ಮುನಿ ಸುಬ್ಬಯ್ಯ, ನಾಗರಾಜ್ ಬಿನ್ ಲೇಟ್ ಮದ್ದೂರಪ್ಪ, ಕೆ.ಪಿ. ನರೇಂದ್ರಬಾಬು ಬಿನ್ ಪಿಳ್ಳ ಮನಿಯಪ್ಪ ಎಂಬುವರ ಪರವಾಗಿ ಆದೇಶ ಮಾಡಿರುತ್ತಾರೆ.

ಈ ಆದೇಶದಂತೆ ಜಂಟಿ ಖಾತೆ ಪಹಣಿ ಸಹ ದಾಖಲಾಗಿರುತ್ತದೆ. ಸದರಿ ಸ್ವತ್ತಿಗೆ ಹಕ್ಕುದಾರರಾದ ನಾಗರಾಜ್ ಬಿನ್ ಮದ್ದೂರಪ್ಪ (ಕಲ್ಲುಕೋಟೆ) ಹಾಗೂ ಇತರರು ಕಾಂಪೌಂಡ್ ನಿರ್ಮಿಸಲು ಹೋದಾಗ ಸದರಿ ಗ್ರಾಮದ ಹೆಗ್ಗಡಿಹಳ್ಳಿ (ಮಜರಾ) ಕಣಿವೆಪುರ ವಾಸಿಗಳಾದ ಮುನಿಲಕ್ಷ್ಮಮ್ಮ ಕೋಂ ಲೇಟ್ ನರಸಿಂಹಯ್ಯ, ಮಧು ಕುಮಾರ್ ಬಿನ್ ಲೇಟ್ ನರಸಿಂಹಯ್ಯ, ಚನ್ನಕೇಶವ ಬಿನ್ ಲೇಟ್ ಗಂಗಪ್ಪ, ಮಂಜುಳಾ ಕೋಂ ಮಧುಕುಮಾರ್ ಎಂಬುವರು ಸ್ವತಿಗೆ ಸಂಬಂಧಿಸಿದ ಹಕ್ಕುದಾರಿಕೆಯುಳ್ಳ ನಾಗರಾಜ್ ಮತ್ತು ಇತರರ ಮೇಲೆ ವಿನಃ ಕಾರಣ ಜಗಳ ಮಾಡಿ ದೌರ್ಜನ್ಯ ದಬ್ಬಾಳಿಕೆ ನಡೆಸಿರುವುದು ಭಾರತೀಯ ಶೂದ್ರ ಸೇನೆ ರಾಜ್ಯ ಸಮಿತಿಗೆ ಅರ್ಜಿ ಮೂಲಕ ಜಮೀನಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ನೀಡಿರುತ್ತಾರೆ. ಈ ಹಿನ್ನೆಲೆ ಸ್ಥಳಕ್ಕೆ ಶೂದ್ರ ಸೇನೆ ರಾಜ್ಯ ಸಮಿತಿ ಮುಖಂಡರು ಭೇಟಿ ನೀಡಿ ದೂರುದಾರರ ಪರ ನಿಂತು ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಹೋರಾಟ ನಡೆಸಿ ದೂರುದಾರರ ಸ್ವತ್ತಿಗೆ ಕಾಂಪೌಂಡ್ ನಿರ್ಮಿಸಲು ಸಹಕರಿಸಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಭಾರತೀಯ ಶೂದ್ರ ಸೇನೆ ಸಂಸ್ಥಾಪಕರು, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿದ್ದರಾಜು ಮಾತನಾಡಿ, ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ ನಂಬರ್ 100/1 ರಲ್ಲಿ ಎಂ.ನಾರಾಯಣಸ್ವಾಮಿ, ನರೇಂದ್ರ ಬಾಬು, ನಾಗರಾಜು ಎಂಬುವವರಿಗೆ ಕೋರ್ಟ್ ಆದೇಶವಾಗಿ ಪಹಣಿ, ಮಿಟೇಶನ್ ಬಂದಿದೆ. ಅದರಂತೆ ಇಂದು ಇವರು ಅವರ ಸ್ವತ್ತಿಗೆ ಬಂದು ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಲಕ್ಷ್ಮಮ್ಮ ಮತ್ತು ಇತರರು ಅಡ್ಡಿಪಡಿಸಿ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವುದಕ್ಕೆ ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆ ಭಾರತೀಯ ಶೂದ್ರ ಸೇನೆಗೆ ದೂರು ಬಂದಿತ್ತು. ಕೂಡಲೇ ಶೂದ್ರ ಸೇನೆ ಸ್ಥಳಕ್ಕೆ ಧಾವಿಸಿ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿರುವವರಿಗೆ ಕಾನೂನಿನ ಅರಿವು ಮೂಡಿಸಲಾಗಿದೆ ಎಂದರು.

ಪಹಣಿದಾರರಾದ ಓ.ಎಂ.ನಾರಾಯಣಸ್ವಾಮಿ ಪುತ್ರ ರಂಜಿತ್ ಬಾಬು ಮಾತನಾಡಿ ನಮಗೆ ವಿನಃಕಾರಣ ತೊಂದರೆ ಕೊಡುತ್ತಿದ್ದಾರೆ ನಾವು ಕೇವಲ ದಲಿತರು ಎಂಬ ಕಾರಣಕ್ಕೆ ಈ ರೀತಿ ದೌರ್ಜನ್ಯಕ್ಕೆ ಮುಂದಾಗಿದ್ದಾರೆ ದೌರ್ಜನ್ಯ ಮತ್ತು ದಬ್ಬಾಳಿಕೆ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಾಲಯದ ಆದೇಶದಂತೆ ನಾವು ನಮ್ಮ ಸ್ಥಳಕ್ಕೆ ಬಂದಿದ್ದೇವೆ ಆದರೆ ಇಲ್ಲಿ ಕಂಪೌಂಡ್ ನಿರ್ಮಿಸಲು ವಿನಾಕಾರಣ ತೊಂದರೆ ಕೊಡುತ್ತಿದ್ದು ಕಂಪೌಂಡ್ ಬಿಳಿಸುವ ಬೆದರಿಕೆ ಕೂಡ ಹಾಕಲಾಗುತ್ತಿದೆ ಎಂದರು.

ಜಮೀನಿನ ಸಹ ಮಾಲೀಕರಾದ ನಾಗರಾಜ್, ನರೇಂದ್ರಬಾಬು ಮಾತನಾಡಿ ಈಗಾಗಲೇ ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸ್ಥಳ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿಕೊಂಡಿದ್ದೇವೆ ಆದರೆ ನಾವು ದಲಿತರು ಎಂಬ ಕಾರಣಕ್ಕೆ ನಮಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ನಮಗೆ ಯಾರ ಆಸ್ತಿಯು ಬೇಡ , ಕೋರ್ಟ್ ಆದೇಶದಂತೆ ನಮಗೆ ಬಂದಿರುವ ಜಾಗ ನಮಗೆ ಬಿಟ್ಟುಕೊಟ್ಟರೆ ಸಾಕು, ಇಂದು ಕಾಂಪೌಂಡ್ ನಿರ್ಮಾಣ ಮಾಡಿದ್ದೇವೆ, ಈ ರೀತಿಯ ದಬ್ಬಾಳಿಕೆ ನಾವು ಸಹಿಸೋಲ್ಲ ಎಂದರು.

ಈ ವೇಳೆ ಭಾರತೀಯ ಶೂದ್ರ ಸೇನೆ ರಾಜ್ಯ ಗೌರವಾಧ್ಯಕ್ಷರಾದ ಎಸ್. ಉಮಾದೇವಿ, ರಾಜ್ಯಾಧ್ಯಕ್ಷ ಹಲನೂರು ಎಚ್.ಡಿ ನರಸಿಂಹರಾಜು, ರಾಜ್ಯ ಕಾರ್ಯಾಧ್ಯಕ್ಷ ಹನುಮನರಸಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.